ಅವಸ್ಥೆ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ಸ್ಥೂಲ ರಾಜಕಾರಣದ ಒಂದು ಸೂಕ್ಷ್ಮ ಮಾದರಿಯನ್ನು ಕಟ್ಟಲು ಪ್ರಯತ್ನಿಸುತ್ತದೆ. ಜನಪರ ಹೋರಾಟಗಳ ಸೈದ್ಧಾಂತಿಕ ರಾಜಕಾರಣ, ನಕ್ಸಲ್‌ಬಾರಿ ಚಳುವಳಿಯ ಉಗ್ರಗಾಮಿ ರಾಜಕಾರಣ, ನಮ್ಮ ಸಂವಿಧಾನ ಒಪ್ಪಿಕೊಂಡಿರುವ ಸಂಸದೀಯ ರಾಜಕಾರಣ, ನವಶ್ರೀಮಂತ ವರ್ಗದ ಅವಕಾಶವಾದೀ ರಾಜಕಾರಣ ಇವೆಲ್ಲ ಒಂದರೊಳಗೊಂದು ಸೇರಿಹೋದ ಸಂಕೀರ್ಣ ರಾಜಕೀಯ ವಿನ್ಯಾಸವನ್ನು ಹೆಣೆಯುವ ಈ ಕಾದಂಬರಿ ಮಾರ್ಕ್ಸ್‌ವಾದ, ಗಾಂಧೀವಾದ ಮತ್ತು ಲೋಹಿಯಾವಾದಗಳ ನೇರ ಮುಖಾಮುಖಿಯನ್ನು, ಕಾದಂಬರಿಯ ಬಂಧವನ್ನು ಸಡಿಲಗೊಳಿಸದೆ ಮಂಡಿಸುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE