ವಿಶ್ವಾಮಿತ್ರನ ಸೃಷ್ಟಿ-ಶ್ರೀರಂಗರು ಬರೆದ ಸಾಮಾಜಿಕ ಕಾದಂಬರಿಯ ಎರಡನೇ ಭಾಗ. ಸದೃಢ ಸಮಾಜವೇ ಈ ಕಾದಂಬರಿಯ ಆಶಯವಾಗಿದೆ. ಆಧುನಿಕ ಸಮಾಜದ ಸಮಸ್ಯೆ ಹಾಗೂ ಸಂಬಂಧಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿಚಾರಾತ್ಮಕ ನಿರೂಪಣೆ ಇದೆ.
ಇಲ್ಲಿಯ ಕಥಾ ನಾಯಕ-ನಾರಾಯಣ. ಉನ್ನತ ಶಿಕ್ಷಣ ಪಡೆದಿದ್ದರೂ ಆತ ಸಮಾಜವನ್ನು ಗ್ರಹಿಸುವ ರೀತಿ, ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ಪರಿ ಎಲ್ಲವೂ ಆತ ಹೇಗೆ ಗ್ರಹಿಸುತ್ತಾನೆ ಎಂಬುದರ ವಿಶ್ಲೇಷಣಾತ್ಮಕ-ವಿಡಂಬನಾತ್ಮಕ ವಸ್ತುವೇ ಈ ಕಾದಂಬರಿ. ವಿಶ್ವಾಮಿತ್ರನ ಸೃಷ್ಟಿ ಕಾದಂಬರಿಯ ಮೊದಲ ಭಾಗವೂ ಪ್ರಕಟವಾಗಿದ್ದು, ಅದರ ಮುಂದುವರಿದ ಭಾಗವು ಈ ಕೃತಿಯಾಗಿದೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE