‘ಅಮೀಬಾ’ ಭಗೀರಥ ಅವರ ಕಾದಂಬರಿಯಾಗಿದೆ. ಈ ಕಾದಂಬರಿಗೆ ಬೆನ್ನುಡಿ ಮಾತುಗಳನ್ನು ಬರೆದಿರುವ ವನಶ್ರೀ ಹುಲ್ಲಣ್ಣನವರು ಕೃತಿಯ ಕುರಿತು ತಿಳಿಸುತ್ತಾ 'ಮೊದಲಿನ 60 ಪೇಜ್ ಓದಲು ಒಂದು ತಿಂಗಳು ಬೇಕಾಯಿತು. ಮುಂದಿನ 357 ಪೇಜ್ ಓದಿ ಮುಗಿಸಿದ್ದು 24 ಗಂಟೆಗಳಲ್ಲಿ. ಕೊನೆಯ ಪುಟ ಮುಗಿಸಿದಾಗ 8 ಎಪಿಸೋಡ್ ನ ವಂಡರ್ ಫುಲ್ ವೆಬ್ ಸೀರೀಸ್ ಒಂದನ್ನು ನೋಡಿದಂತಾಗಿತ್ತು. ಕಥಾ ಹಂದರ ತುಂಬಾ ಸರಳವಾಗಿಯೂ ಇಲ್ಲ. ತುಂಬಾ ಕ್ಲಿಷ್ಟಕರವಾಗಿಯೂ ಇಲ್ಲ. ಸಮಕಾಲೀನ ಸಮಾಜದ ಪ್ರತಿಬಿಂಬ ಎನಿಸುತ್ತದೆ ಎಂದಿದ್ದಾರೆ.
ಗುರುರಾಜ್ ಎಂ. ದೇಸಾಯಿ ಅವರು ಆಕಾರವಿಲ್ಲದ ಅಮೀಬಾ ಅಕ್ಷರಗಳಲ್ಲಿ, ಕಲ್ಪನೆಗಳಲ್ಲಿ ನಿರ್ದಿಷ್ಟ ಆಕಾರ ಪಡೆದು ಕಾದಂಬರಿಯಾಗಿ ಜೀವತಳೆದಿದೆ. ಕೆಲವು ಅಧ್ಯಾಯಗಳು, ಹಲವು ಕ್ಲಿಷ್ಟ ಪಾತ್ರಗಳು, ಹಲವು ಸ್ಪಷ್ಟ ಸನ್ನಿವೇಶಗಳು. ಅಲ್ಲಲ್ಲಿ ಅನುರಾಗ-ಆಧುನಿಕತೆ-ಮಾದಕತೆ ಕಥೆಯ ಓಘಕ್ಕೆ ಪೈಪೋಟಿ ನೀಡುತ್ತವೆ. ಕಟ್ ಬ್ಯಾಕ್ ನಿರೂಪಣೆ ಓದುಗರಲ್ಲಿ ಮತ್ತಷ್ಟು ಏಕಾಗ್ರತೆ ಮೂಡಿಸಿ ಹಿಡಿದಿಡುವಂತಿದೆ ಎಂಬುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಲೇಖಕ ಭಗೀರಥ ಅವರು ಮೂಲತಃ ಬೆಂಗಳೂರಿನವರು. 1991ರಲ್ಲಿ ಜನನ. ಕುವೆಂಪು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದ ನಂತರ ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಮಾನ ಆಸಕ್ತಿಯನ್ನು ಬೆಳೆಸಿಕೊಂಡವರು. ಬಾಲ್ಯದಿಂದಲೇ ಸಾಹಿತ್ಯ ಕೃತಿಗಳನ್ನು ಓದುತ್ತ ಬೆಳೆದಿದ್ದರಿಂದ ಸಹಜವಾಗಿ ಬರವಣಿಗೆಯ ಕಡೆ ವಿಶೇಷವಾದ ಒಲವು. ಪ್ರಸ್ತುತ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 'ಅಮೀಬಾ' ಇವರ ಮೊದಲ ಕಾದಂಬರಿ. ...
READ MORE