ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾದಂಬರಿ-ಕುಡಿಯರ ಕೂಸು. ಮಲೆಕುಡಿಯರ ಜೀವನ ಪದ್ಧತಿ, ಅವರ ಆಚಾರ-ವಿಚಾರ, ನಂಬಿಕೆ, ಸಂಸ್ಕೃತಿ, ಆಹಾರ ಪದ್ದತಿ ಹಾಗೂ ಇನ್ನಿತರೆ ವಿಚಾರಗಳ ಜೊತೆಗೆ ತಮ್ಮ ಸ್ವಾನುಭವವನ್ನು ಬೆರೆಸಿ ರಚಿಸಿದ ಕಾದಂಬರಿ ಇದು. ಕಮರಿ ಕೃಷಿ ಹಾಗೂ ಏಲಕ್ಕಿ ಕೃಷಿ ಬಗ್ಗೆ ವಿವರದ ಜೊತೆಗೆ ಬೇಟೆಯ ಜಾಣ್ಮೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಹುಲಿ ಚಿರತೆ ಹೀಗೆ ವಿವಿಧ ಕ್ರೂರ ಮೃಗಗಳನ್ನು ಕರಿಯನ ಕೈಯಲ್ಲಿ ಬೇಟೆಯಾಡಿಸುವ ಕಾದಂಬರಿಕಾರರು, ಆ ಬೇಟೆಯ ನಿರೂಪಣೆಯೇ ಈ ಕಾದಂಬರಿಯ ಸೌಂದರ್ಯ ಎಂತಲೂ ಹೇಳಬಹುದು.
ಕಿರಿಮಲೆ, ಹಿರಿಮಲೆ ಹೀಗೆ ಇನ್ನೆರಡು ಮಲೆಗಳಲ್ಲಿ ಮಲೆಕುಡಿಯರ ಕೂಡುಕೂಟ ಗಳಿದ್ದು, ಕೆಂಚ ಎಂಬಾತ ಕಿರಿಮಲೆಯ ಗುರಿಕಾರ. ಅವನ ಮಗ ತಿಪ್ಪ. ಬಯನೆ ಮರದ ಹೆಂಡ ಇಳಿಸುವಾಗ ಬಿದ್ದು ಸಾಯುತ್ತಾನೆ. ಇದು ದೈವ ಕಲ್ಕುಡನ ಸಿಟ್ಟು ಎಂದು ಭಾವಿಸುತ್ತಾರೆ. ಕೆಂಚನ ಪತ್ನಿ ಚಿಕ್ಕಿ. ಇಬ್ಬರು ಹೆಂಡಿರ ಗಂಡನಾಗಿದ್ದ ತುಕ್ರನ ಗಾಳಕ್ಕೆ ಸಿಕ್ಕುವ ಚಿಕ್ಕಿ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ, ಅದು ಸಾಧ್ಯವಾಗುವುದಿಲ್ಲ.
ಮುಂದೆ ತುಕ್ರ ಹಾಗೂ ಕರಿಯ ಪಾಲ್ಗೊಳ್ಳುವ ದೈವ ಕೋಲದ ಸನ್ನಿವೇಶದ ಚಿತ್ರಣವಿದೆ. ಹುಲಿಯ ರೂಪದಲ್ಲಿ ಕಲ್ಕುಡ ಬಲಿಯನ್ನು ಕೊಡುದರಿಂದ ದೈವಕ್ಕೆ ಸಿಟ್ಟು ಬಂದಿರಬೇಕು ಎಂದು ತಿಳಿದು, ತನ್ನ ಗುರಿಕಾರರಿನಿಗೆ ಬಿಟ್ಟು ಕೊಡುವೆನೆಂದು ದೈವದ ಪಾತ್ರಿಯೊಡನೆ ನಿವೇಧಿಸಿಕೊಳ್ಳುತ್ತಾನೆ. ಆದರೆ, ದೈವವು ಕರಿಯನನ್ನು ಪ್ರಶ್ನಿಸಿದಾಗ ಕರಿಯ ದೈವದ ಮುಂದೆ ತನ್ನದೇನೂ ಇಲ್ಲ ಎಂದು ವಿನಯ ವ್ಯಕ್ತಪಡಿಸುತ್ತಾನೆ. ಹೀಗಾಗಿ, ಗುರಿಗಾರಿಕೆಯು ಮತ್ತೊಮ್ಮೆ ಕರಿಯನ ಪಾಲಾಗುತ್ತದೆ. ಆದ್ದರಿಂದ ಕುಡಿಯರೆಲ್ಲರೂ ಸೇರಿ ಸಂಭ್ರಮಿಸುತ್ತಾರೆ. ಕುಡಿಯರ ಗೌರವತ್ವದ ಸಂಕೇತವಾದ ಗುರಿಕಾರಿಕೆಯನ್ನು ಪಡೆಯಲು ಎದುರಿಸುವ ಸಂಘರ್ಷಗಳು ಇಲ್ಲಿಯ ಕಥಾ ವಸ್ತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1951ರಲ್ಲಿ (ಪುಟ: 362) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE