ಹೇಮ ಪ್ರಸಾದರ ದಾಂಪತ್ಯದ ಸೊಬಗು,ಚಂಪಾಬಾಯಿ,ವೆಂಕಟರಾಯರ ಕುಟುಂಬ, ಮೋಹನನ ಪಾತ್ರಗಳು, ಪುಟ್ಟ ಉಷಾಳ ಪಾತ್ರ , ಕಾದಂಬರಿಯ ಕೊನೆಯಲ್ಲಿ ಪ್ರಸಾದ್ ಬೆಲಿಂಡಳಿಗೆ ಹೇಳುವ ಸಾಲುಗಳು,ಪ್ರಸಾದ್ ವಿದೇಶದಲ್ಲಿದ್ದಾಗ ಅಲ್ಲಿ ಸ್ನೇಹಿತೆಯಾದ ಬೆಲಿಂಡ ಭಾರತಕ್ಕೆ ಬರುತ್ತಾಳೆ,ಪ್ರಸಾದನ ಅತಿಥಿಯಾಗಿ.ಶ್ರೀಮಂತ, ಸುಂದರ ,ಯಾರ ಅಂಕೆಯಿಲ್ಲದೇ ಬೆಳೆದ ಪ್ರಸಾದ್,ಮದುವೆಯ ಬಗ್ಗೆ ಆಸಕ್ತಿ ಇಲ್ಲದವನು , ಹೇಮಳನ್ನು ಕಂಡ ನಂತರ ಅವಳ ಪ್ರೀತಿಗಾಗಿ ತನ್ನ ಹಳೆಯ ದುರಭ್ಯಾಸಗಳನ್ನು ಬಿಟ್ಟು ಮದುವೆಯಾಗುತ್ತಾನೆ.ಹಳೆಯ ಸ್ನೇಹಿತರು ಒಟ್ಟಿಗೆ ಸೇರಿದಾಗ ಅವನ ದುರಭ್ಯಾಸಗಳು ಮರುಕಳಿಸಿತೇ? ಬೆಲಿಂಡ ಭಾರತಕ್ಕೆ ಬಂದ ಉದ್ದೇಶವೇನು? ವಿದೇಶಿ ಗೆಳತಿಯ ಸ್ನೇಹ ಇವರ ದಾಂಪತ್ಯ ಕ್ಕೆ ಮುಳುವಾಯಿತೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೂ ಈ ಕಾದಂಬರಿಯಲ್ಲಿ ಇದೆ.ಮೋಹನ್, ಪ್ರಸಾದನಿಗೆ ಸ್ನೇಹಿತನಾಗಿ,ಹೇಮಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಪ್ರೀತಿ, ಮಮತೆಯ ಜೊತೆ ಕರ್ತವ್ಯವನ್ನು ನೆರವೇರಿಸಿರುತ್ತಾನೆ.ಮದುವೆಯ ನಂತರ ಇಬ್ಬರ ಜೀವನ ಸಂತೋಷದಿಂದ ಸಾಗುತ್ತಿರುವಾಗ ಹೇಮಳ ತಂದೆ ತಾಯಿ ಯರ ನಿಧನ ಇಬ್ಬರನ್ನೂ ಕೆಲವು ಕಾಲ ದುಃಖದಲ್ಲಿ ಮುಳುಗಿಸುತ್ತದೆ.ಈ ಎಲ್ಲಾ ವಿಷಯಗಳು ಈ ಕೃತಿಯಲ್ಲಿ ಅಡಕವಾಗಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE