ಮಹಾಶ್ವೇತೆ

Author : ಬನ್ನಂಜೆ ಗೋವಿಂದಾಚಾರ್ಯ

Pages 120

₹ 95.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

‘ಮಹಾಶ್ವೇತೆ’ ಬಾಣಭಟ್ಟನ ಆತ್ಮಕಥೆ ಮತ್ತು ಹತ್ತು ಹುಡುಗರ ಕಥೆ - ಬನ್ನಂಜೆ ಗೋವಿಂದಾಚಾರ್ಯರ ಕಾದಂಬರಿ. 1983 ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿ ಇದೀಗ ಮೂರನೇ ಬಾರಿ ಮುದ್ರಣಗೊಂಡಿದೆ. ಈ ಕಾದಂಬರಿಯಲ್ಲಿ ಗಮನ ಸೇಳೆಯುವುದು ಮಹಾಶ್ವೇತೆಯ ಪಾತ್ರ. ಕುವೆಂಪು ಭಾಷೆಯಲ್ಲಿ ಹೇಳುವುದಾದರೆ ಇದು ಪ್ರೇಮದ ವಿಜಯದ ಕತೆ. ವೈರಾಗ್ಯವು ಶೃಂಗಾರಕ್ಕೆ ಶರಣಾದ ಕಥೆ. ಇಲ್ಲಿ ಶೃಂಗಾರವೂ ತಪೋಮಯವಾಗಿದೆ. ತಪಸ್ಸೂ ಶೃಂಗಾರ ಪೂರ್ಣವಾಗಿದೆ. ಇಲ್ಲಿ ಕವಿಯ ದರ್ಶನಕ್ಕೆ ಎರಡು ಕಣ್ಣುಗಳಿವೆ. ಒಂದು ಸರಳ ಗಂಭಿರ ಅನಶ್ಲೀಲ ಸುಂದರ ಶೃಂಗಾರ. ಮತ್ತೊಂದು - ಸದ್ಯಃ ಫಲಾಕಾಂಕ್ಷಿಯಲ್ಲದ, ಜನ್ಮಜನ್ಮಾಂತರದವರೆಗೂ ಕಾಯುವ ಸಾಮರ್ಥ್ಯವೂ ತಾಳ್ಮೆಯೂ ಶ್ರದ್ದೆಯೂ ಇರುವ , ಪ್ರೇಮದ ನೀರವಧ್ಯಾನಮಯವಾದ ತಪಸ್ಸು. ಇವೆರಡೂ ಒಂದು ಮತ್ತೊಂದಕ್ಕೆ ಪೂರಕ, ಪೋಷಕ, ಪ್ರೇಮವು ತಪಸ್ಸಿನಿಂದಲೇ ಶುದ್ಧವಾಗಿ ಶಾಶ್ವತವಾಗಿ ಸಾರ್ಥಕವಾಗುತ್ತದೆ .

ಈ ಕೃತಿ ಜೈನ ಕಾವ್ಯ ಪರಂಪರೆಯ ಸಂದರ್ಭದಲ್ಲಿ ಆ ಕಾವ್ಯಗಳಂತೆಯೇ ಭೋಗದ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ. ಆದರೆ ಅಲ್ಲಲ್ಲಿ ಭೋಗದ ತುತ್ತತುದಿಯಲ್ಲಿ ವೈರಾಗ್ಯವಿದ್ದರೆ ಇಲ್ಲಿ ತಪಸ್ಸು ಮಾಡುವುದು ಪ್ರೇಮ ಫಲಿಸಲು. ಇಲ್ಲಿಯೂ ಜೈನಪುರಾಣಗಳಂತೆ ಜನ್ಮಾಂತರದ ಕತೆಯಿಂದೆ. ಇಲ್ಲಿಯ ಭವಾವಳಿ ಭೋಗ ನಿರಾಕರಣೆಯ ಪಥವಾದರೆ. ಇಲ್ಲಿ ಮತ್ತೆ ಮತ್ತೆ ಜನಿಸುವುದು ಪ್ರೀತಿ ಸಾರ್ಥಕ್ಯವಾಗಿ. ಇದು ಸಂಪೂರ್ಣ ಲೋಕಮುಖಿಯಾದ  ಜೀವನ ಪ್ರೀತಿಯ ಕತೆ .

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books