ಅಕ್ಕಮಹಾದೇವಿ - ಕಾದಂಬರಿ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 144

₹ 150.00




Year of Publication: 2021
Published by: ಅಂಕಿತ ಪುಸ್ತಕ
Address: 53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ಅಕ್ಕಮಹಾದೇವಿ’ ಸು.ರುದ್ರಮೂರ್ತಿ ಶಾಸ್ತ್ರಿ ಅವರ ಎರಡನೇ ಕಾದಂಬರಿ. ಶರಣ ಚಳವಳಿಯ ಮುಖ್ಯ ಧ್ವನಿ ಅಕ್ಕಮಹಾದೇವಿಯ ಕತೆಯ ಎಳೆಯನ್ನಿಟ್ಟುಕೊಂಡು ರಚಿತವಾಗಿರುವ ಮಹತ್ವದ ಕಾದಂಬರಿ ಅಕ್ಕಮಹಾದೇವಿ. ತನ್ನ ವಚನಗಳ ಮೂಲಕ ಪ್ರಜ್ಞೆಯ ಭಾಗವಾಗಿ ಸದಾ ಉಳಿಯುವ ಅಕ್ಕನ ನೇಮ, ನಿಷ್ಠೆ ಮಲ್ಲಿಕಾರ್ಜುನನೆಡೆಗಿನ ಪ್ರೇಮದ ಮೂತುಧಾತು ಈ ಕಾದಂಬರಿಯ ವಸ್ತುವಿಷಯವಾಗಿದ್ದು ಶರಣರ ಕಾಲಘಟ್ಟವನ್ನು ನಮ್ಮ ಕಣ್ಣಮುಂದೆ ಕಟ್ಟಿಕೊಡುತ್ತದೆ. ಈ ಕಾದಂಬರಿಯ ಕುರಿತು ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರು ‘ನಮ್ಮ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ, ಇಡೀ ಭಾರತ ದೇಶದಲ್ಲಿ ಕೂಡ ಅಕ್ಕಮಹಾದೇವಿಯವರಂಥ ಮಹಾವಿರಾಗಿಣಿ ಇನ್ನೊಬ್ಬರಿಲ್ಲ. ಹನ್ನೆರಡನೇ ಶತಮಾನದಷ್ಟು ಹಿಂದೆಯೇ, ಒಂದು ಹೆಣ್ಣಾಗಿ, ದಿಟ್ಟ ನಿರ್ಧಾರ ತೆಗೆದುಕೊಂಡು, ಲೌಕಿಕವಾದ ಎಲ್ಲ ಭೋಗಗಳನ್ನು ತೊರೆದು, ವೈರಾಗ್ಯದ ಹಾದಿಯಲ್ಲಿ ನಡೆದು, ಉತ್ತುಂಗಕ್ಕೇರಿದ ಮಹಾವ್ಯಕ್ತಿ ಅಕ್ಕಮಹಾದೇವಿ. ಅಷ್ಟು ಮಾತ್ರವಲ್ಲದೆ ನೂರಾರು ಸುಂದರ ವಚನಗಳನ್ನು ರಚಿಸಿ, ಕನ್ನಡದ ಮೊಟ್ಟಮೊದಲ ಕವಯಿತ್ರಿಯೆಂಬ ಅಭಿದಾನಕ್ಕೂ ಪಾತ್ರಳಾದ ಅಕ್ಕಮಹಾದೇವಿ ನಮ್ಮ ಕನ್ನಡದ ಹೆಮ್ಮೆ. ಅಂಥ ಮಹಾ ವ್ಯಕ್ತಿಯ ಪರಿಚಯವನ್ನು ನವಪೀಳಿಗೆಗೆ ಮಾಡಿಕೊಡುವ ಒಂದು ಸರಳ ಪ್ರಯತ್ನ ಇದು’ ಎಂದಿದ್ದಾರೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books