ಲೇಖಕಿ ವೈ ಕೆ.ಸಂಧ್ಯಾಶರ್ಮ ಅವರ ಕಾದಂಬರಿ ಬಿಸಿಲ ಮಳೆ. ವಾಸ್ತವ ಬದುಕು ಎಷ್ಟು ವಿಚಿತ್ರವೆಂದರೆ ಕಥೆಗಳಲ್ಲಿ ಕಾಣುವುದಕ್ಕಿಂತ ಇನ್ನೂ ಕ್ರೂರವಾಗಿ, ವಿಷಾದಪೂರ್ಣವಾಗಿಯೂ ನಂಬಲಸಾಧ್ಯವಾಗಿಯೂ ಅಥವಾ ಕಟ್ಟುಕಥೆ ಹಾಗೆ ಕನಸಿನ ಹಾಗೂ ಅನಿರೀಕ್ಷಿತ ತಿರುವುಗಳಿಂದ ಕೂಡಿರಬಹುದು. ಅಂತೆಯೇ 'ಬಿಸಿಲ ಮಳೆ'ಯ ನಾಯಕಿ ಸೀತಾಳ ಜೀವನವೂ ಪ್ರೀತಿಸುವ ಪತಿಯಿದ್ದರೂ, ಅವಳ ಸಂಸಾರನೌಕ ಬಿರುಗಾಳಿಗೆ ಸಿಲುಕಿ ವಿಚಿತ್ರ ಸಿನಿಮೀಯ ತಿರುವು ತೆಗೆದುಕೊಂಡು ದುರಂತ ನಾಯಕಿಯಾಗುವ ಘಟ್ಟ ಬಂದೊದಗುತ್ತದೆ. ಆದರೆ ಎಲ್ಲವೂ ಅನಿರೀಕ್ಷಿತ. ಕಡೆಗೂ ಅವಳಿಗೊಂದು ನೆಲೆ ಸಿಕ್ಕಿತೇ ಎಂಬುದೇ ಕಥೆಯ ಹೂರಣ. ವಿಧಿವಶಾತ್ ವಿಧವೆಯೆನಿಸಿಕೊಂಡ ಶೈಲಜಳ ಕನಸುಗಳು ಕರಗಿ, ನೋವಿನ ಜಂತಿಗಳನ್ನು ಎಣಿಸುತ್ತ ಸೋತುಹೋದ ಹಂತದಲ್ಲಿ ಅವಳ ಬದುಕಿನಲ್ಲಿ ಹೊಂಗನಸು ತುಂಬಿಸಿ ಭರವಸೆ ಬಿತ್ತುವ ಲೇಖಕ, ಸಮಾಜಕ್ಕೆ ಉತ್ತಮ ಪಂಕ್ತಿ ಹಾಕಿಕೊಡಬೇಕಾದ ಬರಹಗಾರ ಬರೆಯುವುದೇ ಒಂದು, ನಡೆದುಕೊಳ್ಳುವುದೇ ಬೇರೆ ರೀತಿಯೇ? ಇದು ಆಷಾಢಭೂತಿಗಳ ಲೋಕವೇ ಎಂಬುದನ್ನು 'ಅನಾವರಣ'ಗೊಳಿಸುವ ಪ್ರಯತ್ನ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE