ಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE