ವೃತ್ತಿಯಿಂದ ಕೃಷಿ ವಿಜ್ಞಾನಿಯಾಗಿ, ಪ್ರವೃತ್ತಿಯಿಂದ ಲೇಖಕರಾದ ಡಾ. ಕೆ. ಎನ್ ಗಣೇಶಯ್ಯ ಅವರ ಕೃತಿ ’ ಬಳ್ಳಿಕಾಳ ಬೆಳ್ಳಿ’.
ಚರಿತ್ರೆಯ ಸಮಗ್ರ ಅಧ್ಯಯನ ನಡೆಯದೆ ಅದರ ವಿವಿಧ ಘಟ್ಟಗಳ, ಘಟನೆಗಳ ಹಾಗೂ ವ್ಯಕ್ತಿಗಳ ವಿಶಿಷ್ಟತೆ ಮತ್ತು ಪ್ರಾಮುಖ್ಯತೆಯ ಅರಿವಾಗಲು ಪೂರಕವಾಗಿ ಈ ಕೃತಿ ಹೊರಬಂದಿದೆ.
ಭಾರತದ ಚರಿತ್ರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಲವು ವಸ್ತು ವಿಷಯಗಳ ಸುತ್ತ ಈ ಕೃತಿ ಹೆಣೆಯಲಾಗಿದೆ. ಈ ಮೂಲಕ ಪಶ್ಚಿಮದ ಕರಾವಳಿಯ ವೀರಗಾಥೆಗಳ ಒಂದು ಘಟ್ಟವನ್ನು ತೆರೆದಿಡುವ ಪ್ರಯತ್ನವನ್ನು ಈ ಕೃತಿ ಮಾಡಿದೆ ಎನ್ನಬಹುದು.
ಕನ್ನಡದ ಓದುಗರಿಗೆ ಕರ್ನಾಟಕದ ಕರಾವಳಿಯಲ್ಲಿನ ಪಶ್ಚಿಮ ಘಟ್ಟಗಳ ಚರಿತ್ರೆಯನ್ನು ಪರಿಚಯಿಸಿ, ಮರೆತು ಹೋಗಿರುವ ಭವ್ಯ ಇತಿಹಾಸವನ್ನು ನೆನಪಿಸುವುದರ ಪರಿಣಾಮವಾಗಿ ಹೊರಬಂದ ಕಾದಂಬರಿ ’ಬಳ್ಳಿಕಾಳ ಬೆಳ್ಳಿ’ಯ ಕಥನ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MOREಬಳ್ಳಿಕಾಳ ಬೆಳ್ಳಿ - ಪುಸ್ತಕ ಪರಿಚಯ