ದೀಪಾಂಕುರ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 216

₹ 170.00




Year of Publication: 1998
Published by: ಕರ್ನಾಟಕ ಸಾಹಿತ್ಯ ಪ್ರಕಾಶನ

Synopsys

ಹೆಸರಿಗೆ ತಕ್ಕಂತೇ ನಾಯಕಿ ಕಣ್ಮಣಿಯೇ.ಅನಾಥಾಶ್ರಮದಲ್ಲಿ ಬೆಳೆದಿದ್ದರೂ ನಯ-ವಿನಯ,ಸದ್ಗುಣ, ಹಿರಿಯರಲ್ಲಿ ಗೌರವ ಭಾವನೆಗಳನ್ನೊಳಗೊಂಡ ನಾಜೂಕಿನ ಹೆಣ್ಣು ಮಗಳು.ಇವಳ ಗೆಳೆತಿ ವಾಸಂತಿಯೂ ಹೆಚ್ಚು ಕಡಿಮೆ ಅನಾಥಳಂತೆಯೇ,ವಾಸಂತಿಯೂ ಕಣ್ಮಣಿಗಿಂತ ಸ್ವಲ್ಪ ವಿಭಿನ್ನ ಗುಣ.ಅವಳಲ್ಲಿ ಹುಟ್ಟಿದಾಗಲೇ ಅಪ್ಪ-ಅಮ್ಮನನ್ನು ಕಳೆದು ಕೊಂಡ ವಾಸಂತಿಗೆ ಶಬರಿ ಮನೆಯವರೇ ಆಸರೆ.ಶಬರಿಯ ನಾಲ್ಕು ಜನ ಗಂಡು ಮಕ್ಕಳಿಗೂ ಮದುವೆಯಾಗಿ ಮನೆಗೆ ಬಂದಿರುವ ಸೊಸೆಗಳಿಗೆ ವಾಸಂತಿಯೆಂದರೆ ತಾತ್ಸಾರ.ಇವುಗಳಿಂದ ಬೇಸತ್ತ ವಾಸಂತಿ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಬಿಡುತ್ತಾಳೆ.ವರ್ಕಿಂಗ್ ಲೇಡಿಸ್ ಹಾಸ್ಟಲ್ ನಲ್ಲಿ ವಾಸಂತಿ-ಕಣ್ಮಣಿ ರೂಮ್ ಮೇಟ್ಸ್.ನಂತರ ಕಾಲದಲ್ಲಿ ಇಬ್ಬರೂ ಆತ್ಮೀಯ ಗೆಳೆತಿಯರು.ಈ ಗೆಳೆತಿಯರು ಒಮ್ಮೆ ಶಬರಿಯವರ ಮನೆಗೆಂದು ಊರಿಗೆ ಹೋದಾಗಲೇ ಕಣ್ಮಣಿ ಮೊದಲ ಬಾರಿ ಆ ದೆವ್ವದ ಬಂಗಲೆಯನ್ನು ನೋಡುವುದು.ಅವಳಿಗೆ ಎಂತದೋ ಆರ್ಕಷಣೆ ಆ ಬಂಗಲೆಯ ಮೇಲೆ.ಇವರಿಬ್ಬರೂ ಮತ್ತು ಶಬರಿಯವರ ಕೊನೆಯ ಮಗನಾದ ಗೋಪಾಲ ಮೂವರು ಸೇರಿ ಒಮ್ಮೆ ಆ ಬಂಗಲೆಗೆ ಹೋದಾಗ ಅಲ್ಲಿ ನಡೆಯುವ ಘಟನೆಗಳು ರೋಮಾಂಚನಕಾರಿಯಾಗಿದೆ.ಕಣ್ಮಣಿಗೆ ಒಂದು ವಿಷ್ಣು ಸಾಲಿಗ್ರಾಮ ಸಿಗುತ್ತದೆ.ಇದರಿಂದ ಅವಳ ಬದುಕೇ ಬದಲಾಗುತ್ತದೆ.ಮುರಳಿ ಕೃಷ್ಣ ಚೈತನ್ಯನನ್ನು ಮೊದಲ ಬಾರಿ ಕಂಡಾಗ ಕಣ್ಮಣಿಗೆ ಮುಂಚೆಯೇ ಇವರನ್ನು ನೋಡಿರುವ ಹಾಗೆಯೂ, ಪರಿಚಯವಿದ್ದ ಹಾಗೂ ಅನಿಸುತ್ತದೆ.ಆದರೆ ಎಲ್ಲಿ, ಹೇಗೆ.ಉತ್ತರವಿಲ್ಲ.ಇಂಥ ಸಮಯದಲ್ಲೇ ಚೈತನ್ಯನ ತಾಯಿಯನ್ನು ನೋಡಿಕೊಳ್ಳುವ ಕೆಲಸ ದೊರೆಯುತ್ತದೆ.ಚೈತನ್ಯನ ತಾಯಿಯ ಆರೋಗ್ಯ ಸರಿ ಇರುವುದಿಲ್ಲ.ಕತ್ತಿನಿಂದ ಕೆಳಗೆ ಯಾವ ಭಾಗವೂ ಸ್ವಾಧೀನದಲ್ಲಿರುವುದಿಲ್ಲ.ಚೈತನ್ಯನಿಗೋ ತಾಯಿಯೇ ಸರ್ವಸ್ವ.ಅವರಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.ಕಣ್ಮಣಿಗೆ ಚೈತನ್ಯನ ಮುಖ, ಹೋದ ಜನ್ಮದ ಋಣಾನುಬಂಧದ ಪರಿಚಯದ ಮುಖ,ಅಂತರಾಳದ ಪ್ರೀತಿಯಿದ್ದರೂ ಅವನನ್ನು ಕಂಡರೆ ಮೂಕಳಾಗುವಳು.ಹೀಗಿರುವಲ್ಲಿ ಚೈತನ್ಯನಿಗೂ ಕಣ್ಮಣಿಗೂ ಹೊಂದಾಣಿಕೆಯಾಗುವುದೆ? ಚೈತನ್ಯನ ತಾಯಿ ಗುಣಮುಖರಾಗುವರೆ? ಕಣ್ಮಣಿಗೂ ಆ ಭೂತ ಬಂಗಲೆಗೂ ಏನು ಸಂಬಂಧ? ಇವೆಲ್ಲಕ್ಕೂ ದೀಪಾಂಕುರದಲ್ಲಿ ಉತ್ತರವಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...

READ MORE

Related Books