‘ಮನಸುಗಳ ಮಿಲನ’ ಸುಮಾ ಉಮೇಶಗೌಡ ಅವರ ರಚನೆಯ ಕಾದಂಬರಿಯಾಗಿದೆ. ಈ ಕೃತಿಯ ಬಗ್ಗೆ ಹೇಳುವುದಾದರೆ ಸ್ತ್ರೀ ಸಂವೇದನೆ ಜೊತೆಯಲ್ಲೇ ಉತ್ತಮ ಸಂದೇಶವಿದೆ. ಜೀವನದಲ್ಲಿ ಪದವಿ ಪ್ರಮಾಣಪತ್ರ ವೇ (ಡಿಗ್ರೀ ಸರ್ಟಿಫಿಕೇಟ್) ಮುಖ್ಯವಲ್ಲ. ಹೆಣ್ಣು ಮನಸ್ಸು ಮಾಡಿದರೆ ಸಾಧಿಸಬಲ್ಲಳು ಸ್ವಾಭಿಮಾನಕ್ಕೆ ಪದೇಪದೇ ಧಕ್ಕೆ ಬಂದರೆ ಸಹಿಸುವುದಿಲ್ಲ ಹೊಂದಾಣಿಕೆ ಮುಖ್ಯ ಸಣ್ಣ ಸಣ್ಣ ಕಾರಣಕ್ಕೆ ವಿಚ್ಛೇದನ ಸರಿಯಿಲ್ಲ ಎಂಬ ಸಂದೇಶವೂ ಇದೆ. ಅ. ನ. ಕೃ ಹೇಳುವಂತೆ ಕವಿಯ ಕೆಲಸ ನೇರವಾಗಿ ಉಪದೇಶ ನೀಡುವುದಲ್ಲ. ಬದಲಿಗೆ ಕೃತಿಯಲ್ಲಿ ಸೃಷ್ಟಿಸಿದ ಪಾತ್ರಗಳು ತಮ್ಮ ನಡವಳಿಕೆಯಿಂದಲೇ ಸಮಾಜಕ್ಕೆ ಸಂದೇಶ ನೀಡಬೇಕು . ಈ ನಿಟ್ಟಿನಲ್ಲಿ ಈ ಕಾದಂಬರಿಯ ಕಥಾನಕ ರೂಪುಗೊಂಡಿದೆ. ಪಾತ್ರಗಳು ತಮ್ಮ ವರ್ತನೆಯಿಂದಲೇ ಸ್ಪಷ್ಟ ಸಂದೇಶ ಸಾರುತ್ತವೆ.
ಸುಮಾ ಉಮೇಶಗೌಡ ಹುಟ್ಟುರು ರಾಣಿಬೆನ್ನೂರು. ಹದಿನಾಲ್ಕು ವರ್ಷ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಾಸದ ನಂತರ ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಸಧ್ಯದ ವಾಸವಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸ ರಾಣಿಬೆನ್ನೂರಿನ ಲಯನ್ಸ್ ಸ್ಕೂಲಿನಲ್ಲಿ. ಹೈಸ್ಕೂಲ್ ಬಿ ಕೆ ಗುಪ್ತಾ ಹೈಸ್ಕೂಲಿನಲ್ಲಿ. ಕಾಲೇಜ್ ಗೆ ಕಾಮರ್ಸ್ ಆಯ್ದುಕೊಂಡು ರಾಜ ರಾಜೇಶ್ವರಿ ಕಾಲೇಜಿನಲ್ಲಿ ಬಿ ಕಾಂ ಪದವಿ ಪೂರೈಸಿದ್ದಾರೆ. ಓದು ಹಾಗು ಬರವಣಿಗೆ ಅವರ ಹವ್ಯಾಸವಾಗಿದೆ. ಮುಖಪುಟದ ಸಾಹಿತ್ಯ ಗ್ರೂಪ್ ನ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಾರೆ ಹಾಗೂ ಪ್ರತಿಲಿಪಿ ನಡೆಸುವ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ‘ಮನಸುಗಳ ಮಿಲನ’ ಮೊದಲ ಕಾದಂಬರಿ. ಕವನ ಸಂಕಲನ ಹಾಗು ...
READ MORE