ನೌಶಾದ್ ಜನ್ಮತ್ತ್ ಅವರ ಮೊದಲ ಕಿರು ಕಾದಂಬರಿ ’ಕಡಮ್ಮಕಲ್ಲು ಎಸ್ಟೇಟ್’. ಕೃತಿಗೆ ಮುನ್ನುಡಿ ಬರೆದ ಭಾರದ್ವಾಜ ಕೆ. ಆನಂದತೀರ್ಥ, ’ಮುಸ್ಲಿಂ ಕುಟುಂಬದ ಸುತ್ತ ಹೆಣೆದ ಕಥೆ. ಕೇರಳ ಮೂಲದಿಂದ ಬಂದ ಒಂದು ಕಾರ್ಮಿಕ ಕುಟುಂಬ ಅನುಭವಿಸುವ ನೋವು, ನಲಿವು, ಕ್ಷೇಮ, ಕಾಮ, ಸವಾಲುಗಳು, ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬರುವ ಅಡೆತಡೆಗಳು, ವಲಸೆಗಾರ ಕುಟುಂಬಗಳ ಬಗ್ಗೆ ಮೂಲ ನಿವಾಸಿಗರು ಅಂತ ಅಂದುಕೊಂಡಿರುವ ಜನ ಹೊಂದಿರುವ ನಿಲುವುಗಳು, ಅವರು ಮಾಡುವ ಶೋ಼ಷಣೆ ಇತ್ಯಾದಿ ಅಂಶಗಳನ್ನು ಒಳಗೊಂಡಿವೆ.’ ಎಂದು ಪ್ರಶಂಸಿಸಿದ್ದಾರೆ..
ಲೇಖಕ ನೌಶಾದ್ ಜನ್ನತ್ತ್ ಮೂಲತಃ ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ ಗ್ರಾಮದವರು. ಸದ್ಯ ಕುಶಾಲನಗರದಲ್ಲಿ ವಾಸವಾಗಿದ್ದು, ಜನ್ನತ್ತ್ ಟಿಂಬರ್ಸ್ ಅಂಡ್ ಫರ್ನಿಚರ್ಸ್ ಎಂಬ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಬಿ. ಎ. ಪದವೀಧರರು. ‘ಕೊಡಗು’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದಾರೆ. ಇವರ ಮೊದಲ ಕೃತಿ-’ಕಡಮ್ಮಕಲ್ಲು ಎಸ್ಟೇಟ್’’ ...
READ MORE