ಹೊಸ ಹೆಂಡತಿ

Author : ಕೃಷ್ಣಮೂರ್ತಿ ಪುರಾಣಿಕ

Pages 189

₹ 2.00




Year of Publication: 1961
Published by: ಗೀತಾ ಪಬ್ಲಿಕೇಷನ್ಸ್
Address: ಬೆಂಗಳೂರು.

Synopsys

ಕೃಷ್ಣ ಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ಹೊಸ ಹೆಂಡತಿ. “ಸಜ್ಜೆ ದುಬಾರಿಯಾದರೂ ಸಜ್ಜನಿಕೆ ದುಬಾರಿಯಾಗಬಾರದು” ಎನ್ನುವ ಮಾತಿನಲ್ಲಿ ವಿಶ್ವಾಸವಿದ್ದ ಶ್ರೀ ಕೃಷ್ಣ ಮೂರ್ತಿ ಪುರಾಣಿಕರು ಆರ್ಷೇಯ ಸತ್ಯಗಳಾದ ಋಜು ಮಾರ್ಗ ಹಾಗೂ ಕರ್ಮಯೋಗದಲ್ಲಿ ನಂಬಿಕೆಯಿಟ್ಟ ಮಹಾನ್‌ ಆದರ್ಶವಾದಿ! ತೆರೆದ ಕಣ್ಣುಗಳಿಂದ ಸಮಾಜವನ್ನು ವೀಕ್ಷಿಸಿ ಕಂಡುಂಡದ್ದನ್ನು, ತಮ್ಮ ಅನುಭವಕ್ಕೆ ದಕ್ಕಿದ್ದನ್ನು ಗ್ರಹಿಸಿಕೊಂಡು ಕಥೆ, ಕಾದಂಬರಿ, ಗೀತ ನಾಟಕ, ಕವಿತೆ, ಶಿಶು ಸಾಹಿತ್ಯ… ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾವನೆಗಳಿಗೆ ಅಕ್ಷರ ರೂಪವಿತ್ತವರು!

ಡಾ ಮಾಧವರಾಯರ ಸಂತೃಪ್ತ ಕುಟುಂಬದಲ್ಲಿ ತಾಯಿ ಮತ್ತು ಹೆಂಡತಿ, ನಂತರದಲ್ಲಿ ಬಹುಜನ್ಮದ ಪೂಜಾ ಫ಼ಲ ಎಂಬಂತೆ ಮಗಳು ಜಯಂತಿ ಜನಿಸಿದಳು!! ಯಾರ ದೃಷ್ಟಿ ತಾಗಿತೋ! ದೇವನಿಗೂ ಈ ಹರ್ಷಭರಿತ ಕುಟುಂಬವನ್ನು ಸೈರಿಸಲಾಗಲಿಲ್ಲವೋ ಎಂಬಂತೆ ಡಾಕ್ಟರ್ ಮಾಧವರಾಯರ ಪತ್ನಿ ಸಾವಿತ್ರಿ ಕ್ಷಯ ರೋಗಕ್ಕೆ ಬಲಿಯಾದಳು! ಹನ್ನೆರಡು ವರ್ಷಗಳ ಸರಸ, ಸಮೃದ್ದ ದಾಂಪತ್ಯ ರಥ ಒಗ್ಗಾಲಿಯಾಗಿ ಮನೆಯ ಬೆಳಕು ನಂದಿತ್ತು! ವಯಸ್ಸಾದ ತಾಯಿಗೆ ಆಸರೆಯಾಗಿ, ಮಗು ಜಯಂತಿಗೆ ತಾಯಾಗಿ, ರಾಯರಿಗೆ ಪತ್ನಿಯಾಗಿ, ಮನೆಗೊಂದು ಹೆಣ್ಣು ಬೇಡವೇ? ಬಂದವಳು ಸಾವಿತ್ರಿಯಾಗದೇ ಜಯಂತಿಗೆ ಮಲತಾಯಿಯಾದರೆ? ಎಂಬ ಭೀತಿ ರಾಯರದು! ರಾಯರು ರೋಗಿಗಳ ಆರೈಕೆಯಲ್ಲಿ ಸಾವಿತ್ರಿಯನ್ನು ಮರೆಯಲೆತ್ನಿಸಿದರೂ ಅದು ಸಾಧ್ಯವೇ? ಹೆಣ್ಣು ಕೊಡುವವರಿದ್ದರೂ , ಮರು ಮದುವೆಗೆ ರಾಯರಿಗೆ ಮನಸಿರಲಿಲ್ಲ! ಆದರೆ ವಯಸ್ಸಾದ ತಾಯಿಯ ಮಾತನ್ನು ಮೀರಲಾಗದೆ, ಆಕೆಯೇ ಆಯ್ಕೆ ಮಾಡಿದ ವೀಣಾಳನ್ನು ಮದುವೆಯಾಗಿ ಹೊಸ ಅಧ್ಯಾಯದ ಆರಂಭವೂ ಆಯಿತು! ಹೀಗೆ ಕಥೆ ಸಾಗುತ್ತದೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books