ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರ ಸಮಾಜಿಕ ಕಾದಂಬರಿ ‘ಪಾವನ ಗಂಗಾ’. ಅಪೂರ್ಣ ಜೀವನದ ಒಂದು ಚಿತ್ರವೇ ಸಾಹಿತ್ಯದಲ್ಲಿ ಪೂರ್ಣಕೃತಿ ಎನ್ನುವವರಿಗೆ ‘ಪಾವನ ಗಂಗಾ’ ಒಂದು ರೀತಿಯ ಪೂರ್ಣ ಚಿತ್ರ. ಜೀವನದ ಮರು ಭೂಮಿಯಲ್ಲಿ ಒಮ್ಮೊಮ್ಮೆ ಹಸಿರು ನೆಲದ ದರ್ಶನವಾಗಿ ಆ ಮಟ್ಟಿಗೆ ಜೀವನದಲ್ಲಿ ನೆಮ್ಮದಿ ಬರುವುದುಂಟು. ಈ ನೆಮ್ಮದಿಯ ಜೀವನದ ಬಳ್ಳಿ ಬಿಟ್ಟ ಹೂ. ಆ ಮಟ್ಟಿಗೆ ಆ ಸಂತೋಷಪೂರ್ಣವಾದುದು. ‘ಪಾವನ ಗಂಗಾ’ದ ಪೂರ್ಣತೆಯ ಅರ್ಥವಿದು.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE