ಕನಕನ ಹೆಜ್ಜೆ ಹೊರಪೇಟೆ ಮಲ್ಲೇಶಪ್ಪ ಅವರ ಕೃತಿಯಾಗಿದೆ. ಶ್ರೇಷ್ಟ ಸಂತಕವಿ ಕನಕದಾಸರ ಸಾಹಿತ್ಯ, ತತ್ವಜ್ಞಾನದ ಪ್ರಸಾರ ಮತ್ತು ಕನಕದಾಸರ ಸ್ಮಾರಕಗಳ ಅಭಿವೃದ್ಧಿಗಾಗಿಯೇ ರಚನೆಯಾದ 'ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ'ವು ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಮ್ಮಟ, ವಿಚಾರ ಸಂಕಿರಣ, ಸಂಸ್ಕೃತಿ ಸಮ್ಮೇಳನ, ಪುಸ್ತಕ ಪ್ರಕಟನೆ, ಕೀರ್ತನೆಗಳ ಹಾಡುಗಾರಿಕೆ ಮತ್ತು ಅವುಗಳ ಧ್ವನಿಮುದ್ರಣ, ನಾಟಕಗಳ ರಚನೆ ಮತ್ತು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಈ ಪ್ರಾಧಿಕಾರದ ಒಂದು ಮುಖವಾದರೆ, ಕನಕದಾಸರು ವಾಸವಾಗಿದ್ದ ಸ್ಥಳ, ಅರಮನೆ, ಪೂಜಿಸುತ್ತಿದ್ದ ದೇವಸ್ಥಾನಗಳನ್ನು ಪುನರ್ ನಿರ್ಮಾಣ ಮಾಡಿ ಬಾಡ, ಕಾಗಿನೆಲೆ ಪ್ರದೇಶವನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಿರುವುದು ಪ್ರಾಧಿಕಾರದ ಮತ್ತೊಂದು ಮುಖ. ಜಂಗಮ ಮತ್ತು ಸ್ಥಾವರ ಎರಡೂ ನೆಲೆಗಳಲ್ಲಿ ಪ್ರಾಧಿಕಾರದ ಚಟುವಟಿಕೆಗಳು ನಾಡಿನ ಗಮನ ಸೆಳೆದಿರುವುದು ಪ್ರಶಂಸನೀಯ.
ಹೊರಪೇಟೆ ಮಲ್ಲೇಶಪ್ಪ ಅವರು ಕೊಪ್ಪಳ ಜಿಲ್ಲೆಯ ಮೋರನಹಳ್ಳಿ ಗ್ರಾಮದವರು. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಹೊನ್ನಾಣ, ಹರಿಹರ, ಭದ್ರಾವತಿ, ಶಿಗ್ಗಾವಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದು ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕನಕದಾಸರ, ಸಂಗೊಳ ರಾಯಣ್ಣ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಾಹಿತ್ಯ ಪ್ರಕಟಣೆ, ಪ್ರಚಾರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೃತಿಗಳು: ಕನಕನ ಹೆಜ್ಜೆ, ಹಂತಿ ...
READ MORE