ಲೇಖಕ ವಿಠಲ್ ಶೆಣೈ ಅವರ ಕಾದಂಬರಿ-ಕ್ರಿಪ್ಟೋ ಕರೆನ್ಸಿ, ಬ್ಲಾಕ್ ಚೇನ್, ಬಿಟ್ ಕಾಯಿನ್ ಹೀಗೆ ಹಣದ ಕುರಿತ ಜನರಲ್ಲಿರುವ ನಂಬಿಕೆಯನ್ನು ಅಲುಗಾಡಿಸುವ ತಂತ್ರಜ್ಞಾನದ ಸುತ್ತ ಹೆಣೆದ ಕಾದಂಬರಿ. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ವಿವೇಕ್ ಭಾರತಕ್ಕೆ ಬಂದು ಪ್ಲಸ್ ಮನಿ ಎಂಬ ಸ್ಟಾರ್ಟ್ ಅಪ್ ಕಂಪನಿ ಆರಂಭಿಸುತ್ತಾನೆ. ಅಕ್ರಮವಾಗಿ ಬಿಟ್ ಕಾಯಿನ್ ಏಟಿಎಂ ತೆರೆದಿದ್ದ. ಈತನ ಆರೋಪದಲ್ಲಿ ಈಗ ಜೈಲು ಪಾಲಾಗಿದ್ದಾನೆ. ಹೀಗೆ ವಿಷಯ ವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವಿಠ್ಠಲ್ ಶೆಣೈ ಅವರು ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ತಾವು ಓದಿದ ಪುಸ್ತಕಗಳ ಬಗ್ಗೆ ತಮ್ಮ ಬ್ಲಾಗ್‌ಗಳಲ್ಲಿ ಬರೆಯುವ ಹವ್ಯಾಸ ಉಳ್ಳವರು. ಕೃತಿಗಳು: ಪಾರಿವಾಳಗಳು (ಲಲಿತ ಪ್ರಬಂಧಗಳು) ಹಾಗೂ ತಾಳಿಕೋಟೆಯ ಕದನದಲ್ಲಿ (ಕಾದಂಬರಿ) , ಹುಲಿ ವೇಷ (ಕತೆಗಳ ಸಂಕಲನ) ಹಾಗೂ ನಿಗೂಢ ನಾಣ್ಯ (ಕಾದಂಬರಿ) ...
READ MORE