‘ಗೋರ್ ಮಾಟಿ’ ಕೃತಿಯು ಶಾಂತನಾಯ್ಕ ಶಿರಗಾನಹಳ್ಳಿ ಅವರ ಕಾದಂಬರಿಯಾಗಿದೆ. ಈ ಕಾದಂಬರಿ ಲಂಬಾಣಿ ಜನಾಂಗದ ಕಥನವಾಗಿದೆ. ಗೋರ್ಮಾಟಿ ಎಂದರೆ ನನ್ನ ಜನರು ಎಂದರ್ಥವೆಂದು ಹೇಳುತ್ತಾರೆ ಇಲ್ಲಿ ಲೇಖಕರು. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಗೋರ್ಮಾಟಿ ಜನಾಂಗವು ಇಲ್ಲಿಯ ತನಕ ಶೋಧಿಸಲ್ಪಡದೇ ಉಳಿದ ವಲಯವಾದ್ದರಿಂದ ಸಹಜವಾಗೇ ಕಾದಂಬರಿಗೆ ಒಂದು ತಾಜಾತನವಿದೆ. ಜತೆಗೆ ತಾಂಡಾವಗಳ ಆಡುಭಾಷೆ, ನಿರೂಪಣಾ ಶೈಲಿಯು ಶಕ್ತಿಯುತವಾಗಿದೆ.
ಡಾ.ಶಾಂತನಾಯ್ಕ ಶಿರಗಾನಹಳ್ಳಿಯವರು ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಶಿರಗಾನಹಳ್ಳಿಯವರು. ಕರ್ನಾಟಕ ವಿ.ವಿ.ಯಿಂದ ಎಂ.ಎಂ. (ಇಂಗ್ಲಿಷ್) ಪದವೀಧರರು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು. ಕೃತಿಗಳು: ಗುಡ್ಡಜ್ಜ, ಕೊಂಯ್ಯ ಮತ್ತು ಧೋತ್ರ (ಕಥಾ ಸಂಕಲನಗಳು), ಮೀನು ಮತ್ತು ಹುಡುಗಿ, ಹಳೆ ಭಾವನೆ ಮತ್ತು ಹೊಸ ಮನುಷ್ಯ (ಕವನ ಸಂಕಲನಗಳು), ಗೋರ್ ಮಾಟಿ, ಲಮಾಣ್ (ಕಾದಂಬರಿಗಳು), ಮಲಾಣ- ಇವರ ಆತ್ಮಕಥನ, ...
READ MORE