ಕಾದಂಬರಿ ಮಿಸ್ ರೋಜಿಯ ಹತ್ಯೆಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದಿಂದ, ಕಾದಂಬರಿಯ ಆರಂಭವಾಗುತ್ತದೆ, ಏಕದಂ ಒಂದು ಸಂವಾದದೊಂದಿಗೆ ಅದು ಪತ್ತೇದಾರ ಮತ್ತು ಅವನ ಸೆಕ್ರೆಟರಿಯ ನಡುವೆ ನಡೆಯುವ ಸಂವಾದ, ಹಾಗೂ ಪತ್ತೇದಾರಿ ಕಾದಂಬರಿಯಲ್ಲಿ ಬರುವ ಕುತೂಹಲ, ನಿಗೂಢತೆ, ಕಾದಂಬರಿಯ ಉದ್ದಕ್ಕೂ ಲೇಖಕರು ಕಾಯ್ದುಕೊಂಡು ಬಂದಿರುವುದು ಕಂಡುಬರುತ್ತದೆ. ಮೊದಲ ಅಧ್ಯಾಯದಲ್ಲಿ ಕುತೂಹಲವನ್ನು ಹುಟ್ಟಿಸುವ ಆರಂಭ, ಪತ್ತೇದಾರಿ ಕಾದಂಬರಿಯಲ್ಲಿ ಸಹಜವೆಬಂತೆ ಈ ಕಾದಂಬರಿಯಲ್ಲಿದೆ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ರೋಜಿಯ ಕೊಲೆಯ ಸುತ್ತ ಹೆಣೆಲ್ಪಟ್ಟ ಈ ಕಾದಂಬರಿ ಬರು ಬರುತ್ತಾ ಅನೇಕ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ ಎನ್ನುತ್ತಾರೆ ಶಿರಗಾನಹಳ್ಳಿ ಶಾಂತಾನಾಯ್ಕ್.
ನೂರ್ ಜಹಾನ್ ಕನ್ನಡ ಎಂ,ಎ ಪದವಿಗಳಿಸಿ, ಮಹಿಳಾ ಅಧ್ಯಯನ ದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಹಾಗೂ ಕವಿಗೋಷ್ಠಿಗಳಲ್ಲಿ, ವಿಚಾರಗೋಷ್ಠಿಗಳಲ್ಲಿಯು ಭಾಗವಹಿಸಿದ್ದಾರೆ. ಕೃತಿಗಳು: ಪ್ರೀತಿಯ ಹಾದಿಯಲ್ಲಿ, ಮುಡಿಯಿಂದ ಬಿದ್ದ ಹೂವು, ಮುಂತಾಜ್ ಮತ್ತು ಇತರೆ ಕಥೆಗಳು, ಅನಾಥೆ, ಕಾವ್ಯಗೊಂಚಲು, ಪರಿವರ್ತನೆ , ಕಾನೂನಿನ ಹದ್ದಿನಲ್ಲಿ ಅಪ್ರಕಟಿತ ಕೃತಿಗಳು: ಜೀವನ ಕಾವ್ಯ, ಜೀವನ ಸಾಗರ, ಗಾಲಿಬ್ ರವರ ಗಜಲ್ ಗಳು, ಮಧುಶಾಲೆ,ಕಲ್ಪನಾ,ಲೇಖನ ಮಾಲೆ,ಅಹಿಲ್ಯಾಬಾಯಿ ಹೋಳ್ಕರ್ , ಕೊಳಚೆ ಪ್ರದೇಶದ ಮಹಿಳೆಯರ ಸ್ಥಿತಿ ಗತಿ ...
READ MORE