‘ಓಬಳವ್ವನಾಗತಿ’ ವೇಣು ಬಿ.ಎಲ್ ಅವರ ಐತಿಹಾಸಿಕ ಕಾದಂಬರಿ. ಒನಕೆ ಓಬವ್ವಳಂತೆಯೇ ಚಿತ್ರದುರ್ಗದ ಚರಿತ್ರೆಯಲ್ಲಿ ಮತ್ತೊಬ್ಬ ವೀರಾಗ್ರಣಿ ಓಬಳವ್ವನಾಗತಿ. ಹೆಬ್ಬುಲಿ ಹಿರೇಮದಕರಿ ನಾಯಕರ ಪತ್ನಿ ವೀರರಾಣಿ ‘ಗಂಡೋಬಳವ್ವ’ಳೆಂದೇ ಇತಿಹಾಸದಲ್ಲಿ ಗುರುತಿಸಲ್ಪಟ್ಟವಳು. ಆಕೆಯ ಮುತ್ಸದ್ಧಿತನ, ಧೈರ್ಯ, ರಣೋತ್ಸಾಹ, ತಂತ್ರ, ಕುತಂತ್ರಗಳ ಮೂಲಕ 12 ವರ್ಷದ ಬಾಲಕ ಮದಕರಿನಾಯಕನಿಗೆ ಪಟ್ಟವನ್ನು ಕಟ್ಟಲು ಆ ಕಾಲಘಟ್ಟದಲ್ಲಿ ಎದುರಿಸಿದ ಸವಾಲು ಸಮಸ್ಯೆಗಳು, ಚಿತ್ರದುರ್ಗದ ಸಿಂಹಾಸನವನ್ನು ಅರ್ಹತೆಯಿರುವ ಗಂಡುಗಲಿ ರಣಕಲಿಯೇ ಏರಬೇಕೆಂಬ ಸದುದ್ದೇಶದಿಂದ ಆಕೆ ನಡೆಸಿದ ಹುನ್ನಾರ, ತೋರಿದ ನಾಡಪ್ರೇಮ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗಿ ಬಿಡುವ ಸಾಧ್ಯತೆ ಇತ್ತು ಆ ರೋಚಕ ಕತೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...
READ MORE