ಬಾಲ್ಯಸ್ನೇಹಿತರಿಬ್ಬರ ಜಟಿಲ ಸಂಬಂಧವನ್ನು; ಸಾವನ್ನು ಎದುರಿಸುವ ಹಾಗೂ ಬದುಕನ್ನು ಕಟ್ಟುತ್ತಿರುವ ಕಾಲಘಟ್ಟಗಳ ಹಿನ್ನಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವೇ ಈ ಕೃತಿಯ ಕಥಾವಸ್ತು. ಬಾಲದಲ್ಲಿ ಜೊತೆಯಾದ ಸ್ನೇಹಿತರಿಬ್ಬರ ನಡುವಿನ ಗೆಳೆತನ, ಭಾವನಗಳು, ಬದುಕು, ವಾಸ್ತವ ಇವೆಲ್ಲವನ್ನು ಕಾದಂಬರಿಕಾರ ವಿವರಿಸುತ್ತಾ ಹೋಗುತ್ತಾರೆ. ಸುಪ್ತ ಕಾದಂಬರಿಯ ಮೂಲಕ ಲೇಖಕರು ಮನದಾಳದ ಭಾವನೆಗಳು, ಪರಿಸ್ಥಿತಿ ವಿವರಿಸುತ್ತವೆ.
ಮೂಲತಃ ತುಮಕೂರಿನವರಾದ ಡಾ. ಕೆ.ಬಿ. ಶ್ರೀಧರ್ ಅವರು ಜನಿಸಿದ್ದು 1976 ಏಪ್ರಿಲ್ 28ರಂದು. ತುಮಕೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. ನಿಮ್ಹಾನ್ಸ್ ಹಾಗೂ ಸೆಂಟ್‌ಜಾನ್ಸ್ ವೈದ್ಯಕೀಯ ಕಾಲೇಜುಗಳಲ್ಲಿ ಮನೋರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮನೋರೋಗ ತಜ್ಞರಾಗಿ ಸುಮಾರು ಹತ್ತು ವರ್ಷಗಳು ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಚಮುಖಿ ಇವರ ಚೊಚ್ಚಲ ಕಾದಂಬರಿ. ಈ ಕಾದಂಬರಿಗೆ 2016ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ದೊರೆತಿದೆ. ಸುಪ್ತ ...
READ MORE