ಕಾದಂಬರಿಕಾರ್ತಿ ರಾಧಾದೇವಿ ಅವರ ಮೊಟ್ಟ ಮೊದಲ ನಾಯಕ ಪ್ರಧಾನ ಕಾದಂಬರಿ -ಅನುರಾಗದ ಅಂತಃ ಪುರ. ನಾಯಕಿ ಆಶಾ ಶ್ರೀಮಂತಳು. ಕಾರ್ಖಾನೆಯೊಂದರ ಮಾಲಕಿ. .ನಾಯಕ ರಾಜೇಂದ್ರ ಅದೇ ಕಾರ್ಖಾನೆಯ ಕಾರ್ಮಿಕ ಮತ್ತು ಧೀಮಂತ ವ್ಯಕ್ತಿತ್ವದವನು. ಆಕಸ್ಮಿಕವಾಗಿ ಆಶಾ- ರಾಜೇಂದ್ರರ ಮದುವೆ ನಡೆದರೂ. ನಾಯಕಿ ಆಶಾ, ರಾಜೇಂದ್ರನನ್ನು ಗಂಡನಾಗಿ ಒಪ್ಪಿ ಕೊಳ್ಳುವುದಿಲ್ಲ ಆದರೆ, ನಾಯಕನ ಪ್ರಭಾವಿ ವ್ಯಕ್ತಿತ್ವದಿಂದ ಆಕರ್ಷಿತಳಾಗುವ ನಾಯಕಿ ಮುಂದೆ ಏನು ಮಾಡುತ್ತಾಳೆ ಎಂಬುದನ್ನು ಕಾದಂಬರಿಯಲ್ಲಿ ಓದಿ ಸವಿಯಬೇಕು. ಈ ಕಥೆ ಓದುಗರಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾದದ್ದು ಮಾತ್ರವಲ್ಲ .ಖ್ಯಾತ ಚಿತ್ರ ಸಾಹಿತಿ ದಿ. ಚಿ. ಉದಯ ಶಂಕರ್ ಅವರ ಮೆಚ್ಚುಗೆಯನ್ನೂ ಗಳಿಸಿ, ಅವರ ಮುಖಾಂತರ ರಾಜ್‌ಕುಮಾರ್ ನಟಿಸಿದ ‘ಅನುರಾಗ ಅರಳಿತು’ ಎಂದು ಬೆಳ್ಳಿ ತೆರೆಯ ಮೇಲೆ ಮೂಡಿ, ಮೆಚ್ಚುಗೆಗೆ ಪಾತ್ರವಾಯಿತು. ನಂತರ ಹಿಂದಿ, ತೆಲುಗು, ತಮಿಳು ಭಾಷೆಗಳ ತೆರೆಯ ಮೇಲೂ ರಾರಾಜಿಸಿತು.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE