ಈ ಕೃತಿಯಲ್ಲಿ ಸುಮಾರು ಹದಿನೇಳು ಕಥೆಗಳಿವೆ.ಸಣ್ಣಪುಟ್ಟ ಕಳ್ಳತನಮಾಡಿ ಜೈಲಿಗೆ ಹೋದ ಒಬ್ಬ ಸೋಮಾರಿಯ ಕಥೆ.ಅವನು ಜೈಲಿನಿಂದ ಹಿಂತಿರುಗಿ ಬಂದ ಮೇಲೂ ಕಷ್ಟಪಟ್ಟು ದುಡಿಯದೆ ಮತ್ತೆ ಮರದ ಠಕ್ಕು ಮಾಡಿ ಜನರನ್ನು ಮರಳು ಮಾಡುವ ಕಥೆಯೆ “ಮರೆಯಾದ ಮಾರಮ್ಮ” ಈ ತಲೆಬರಹವನ್ನು ಪುಸ್ತಕದ ಶಿರ್ಷಿಕೆಯಾಗಿ ಆಯ್ಕ ಮಾಡಲಾಗಿದೆ. ಅದಲುಬದಲಾದ ಪ್ರೇತಗಳು' ಎಂಬ ಈ ಕಥೆಯಲ್ಲಿ ವೇದಮೂರ್ತಿಗಳೂ, ವರದಪ್ಪನೂ ಒಂದೇ ಆಸ್ಪತ್ರೆಯಲ್ಲಿ ಅಸು ನಿಗುತ್ತಾರೆ. ಒಂದೇ ಸ್ಮಶಾನದಲ್ಲಿ ಅವರಿಬ್ಬರ ಅಂತ್ಯಕ್ರಿಯೆ ನಡೆಯುತ್ತದೆ. ಆದರೆ ಅಪರಕರ್ಮಗಳನ್ನು ಮಾಡುವಾಗ ವೇದಮೂರ್ತಿಗಳ ಜಾಗದಲ್ಲಿ ವರದಪ್ಪನೂ ವರದಪ್ಪನ ಜಾಗದಲ್ಲಿ ವೇದಮೂರ್ತಿಯೂ ಅದಲುಬದಲಾಗುತ್ತಾರೆ. ಈ ತರದ ಹಲುವು ಕೂತುಹಲಕಾರಿಯಾದ ಕಥೆಗಳ ಸಂಗ್ರಹವೇ ಈ ಪುಸ್ತಕ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE