ಗಾಡ್ ಈಸ್ ಗ್ರೇಟ್: ಸೈನ್ಸ್ ಸ್ಪಿರಿಚುವ್ಯಾಲಿಟಿ ಲವ್

Author : ಜೋಯಿಸ್ ಉಪೇಂದ್ರ ಕುಮಾರ

Pages 88

₹ 210.00




Year of Publication: 2020
Published by: ವೈಟ್ ಫಾಲ್ಕನ್ ಪಬ್ಲಿಷಿಂಗ್ ಸಲ್ಯೂಷನ್ಸ್
Address: # 335, RCS-CPS Enclave, Sector 48A, ಚಂಡಿಗಡ-160047, ಭಾರತ.
Phone: 91-6284048150

Synopsys

ಪ್ರತಿಯೊಬ್ಬರ ಜೀವನದಲ್ಲಿ ಮಾರ್ಗಗಳು ನೇರವಾಗಿಲ್ಲ. ಅವು ಅಡೆ-ತಡೆ-ಏಳು ಬೀಳುಗಳಿಂದ ಕೂಡಿದ್ದು, ಪ್ರತಿ ಹೆಜ್ಜೆಗೂ ಬೇಸರ-ನಿರಾಶೆ ಮೂಡಿಸುತ್ತವೆ. ಇಂತಹ ಸನ್ನಿವೇಶದ ಮಧ್ಯೆಯೂ ಸಂತಸವನ್ನು ಕಂಡುಕೊಳ್ಳುವ ಅಥವಾ ಸಂತಸದತ್ತ ನಮ್ಮನ್ನು ಕರೆದು ಕೊಂಡು ಹೋಗುವ ತಿರುವುಗಳಿರುತ್ತವೆ. ಹೀಗಾಗಿ, ಈ ಜೀವನ ನಮಗೆ ಏನೇ ನಿರಾಶೆ ನೀಡಲಿ, ನಾವು ಮಾತ್ರ ಆಶಾವಾದಿಗಳಾಗಬೇಕು. 

ನಮ್ಮ ಆತ್ಮದ ಕೆಲ ಪ್ರಶ್ನೆಗಳಿಗೆ ವಿಜ್ಞಾನ ಉತ್ತರಿಸದು. ಆದರೆ, ನಿಮ್ಮ ಆತ್ಮಚೇತನ ಮಾತ್ರ ಆ ಉತ್ತರ ನೀಡುತ್ತದೆ.  ಅದನ್ನು ಕಿವಿಗೊಟ್ಟು ಸಹನೆಯಿಂದ ಕೇಳಬೇಕು. ನಿರ್ಲಕ್ಷಿಸಿದರೆ ನಿಮ್ಮದೇ ಆದ ಸಂತಸವನ್ನು ಕಳೆದುಕೊಳ್ಳಲೂಬಹುದು. ಇಂತಹ ಕೆಲ ಪ್ರಶ್ನೆಗಳಿಗೆ ಡಾ. ಜೋಯಿಸ್ ಉಪೇಂದ್ರ ಕುಮಾರ ಅವರು ಬರೆದ ‘ಗಾಡ್ ಈಸ್ ಗ್ರೇಟ್: ಸೈನ್ಸ್ ಸ್ಪಿರಿಚುವ್ಯಾಲಿಟಿ ಲವ್’ ಕೃತಿಯು ಸಮಾಧಾನಕರ ಉತ್ತರ ನೀಡುತ್ತದೆ. ಇದಕ್ಕೆ ಪೂರಕವಾಗಿ, ಸಾಧಕರ ಉದಾಹರಣೆಗಳನ್ನು ಈ ಕೃತಿ ಒಳಗೊಂಡಿದೆ.  

ಲೇಖಕರು ಹೇಳುವಂತೆ ವಿಜ್ಞಾನ, ಆಧ್ಯಾತ್ಮ ಹಾಗೂ ಪ್ರೀತಿ; ಈ ಮೂರು ವಿಷಯಗಳ ನಡುವಿನ ಸಂಬಂಧವನ್ನು  ಬಣ್ಣಿಸಲು ಪ್ರಯತ್ನಿಸಿರುವ ಫಲಶ್ರುತಿಯೇ ‘ಗಾಡ್ ಈಸ್ ಗ್ರೇಟ್’ ಎಂಬ ಕಾದಂಬರಿ. ಲೇಖಕರು ವಿಜ್ಞಾನದ ಕುರಿತಾದ ತಮ್ಮ ಅಗಾಧ ಜ್ಞಾನವನ್ನು ಈ ಕೃತಿಯಲ್ಲಿ ಬಿಂಬಿಸಿದ್ದಾರೆ. ಒಬ್ಬ ಯುವವಿಜ್ಞಾನಿ ಆಧ್ಯಾತ್ಮದ ಕುರಿತಾಗಿ ತನಗಿರುವ ಗೊಂದಲಗಳನ್ನು ನಿವಾರಿಸಲು ಅನುಸರಿಸುವ ಮಾರ್ಗದಲ್ಲಿ ಆಗುವ ಅನುಭವಗಳನ್ನು ವರ್ಣಿಸಿದ್ದಾರೆ. ಹಾಗೆಯೇ ಮಧುರವಾದ ಪ್ರೇಮಕಥೆಯ ಎಳೆಯೂ ಕೂಡ ಕಾದಂಬರಿಯಲ್ಲಿ ಅಡಕವಾಗಿದೆ. ದೇವರೆಂದರೆ ಒಂದು ಸಾರ್ವಕಾಲಿಕ ಶಕ್ತಿ. ಅದಕ್ಕೆ ಯಾವುದೇ ಜಾತಿ, ಧರ್ಮ, ಭಾಷೆ, ದೇಶಗಳ ಪರಿಧಿಯಿಲ್ಲ. ಈ ಜಗತ್ತು ದೇವರ ಅದ್ಭುತ ಸೃಷ್ಟಿ. ಇದರಲ್ಲಿರುವ ಪ್ರತಿ ಜೀವಿ ಹಾಗೂ ನಿರ್ಜೀವಿಗಳಲ್ಲಿ ದೇವರನ್ನು ಕಂಡು ಸೌಹಾರ್ದದ ಸಹಬಾಳ್ವೆಯ ಜೀವನವನ್ನು ನಡೆಸುವುದೇ ದೇವರನ್ನು ಸಾಕ್ಷಾತ್ಕರಿಸುವ ಮಾರ್ಗವೆನ್ನುವುದೇ ಈ ಕಾದಂಬರಿಯ ತಿರುಳು.  ವಿಜ್ಞಾನ, ಆಧ್ಯಾತ್ಮ ಹಾಗೂ ಪ್ರೀತಿ ; ಇವೆಲ್ಲವುದರ ಅಂತಿಮ ಉದ್ದೇಶ ದೇವರನ್ನು ಪಡೆಯುವುದೇ ಆಗಿದೆ ಎಂಬುದು ಈ ಕೃತಿಯ ಸಂದೇಶ. 

About the Author

ಜೋಯಿಸ್ ಉಪೇಂದ್ರ ಕುಮಾರ
(21 December 1982)

ವೃತ್ತಿಯಿಂದ ರೇಡಿಯಾಲಜಿಸ್ಟ್ ಆಗಿರುವ ಡಾ. ಜೋಯಿಸ್ ಉಪೇಂದ್ರ ಕುಮಾರ ಅವರು ಮೂಲತಃ ಹೊಸಪೇಟೆಯವರು. ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದರು. ನಂತರ ಅವರು 5 ವರ್ಷ ಕಾಲ ಭಾರತೀಯ ಸೇನೆಯಲ್ಲಿ ಮೇಜರ್ ಶ್ರೇಣಿಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿಯ ವಾಯುಸೇನೆಯ ಕಮಾಂಡ್ ಆಸ್ಪತ್ರೆಯಲ್ಲಿ ರೇಡಿಯಾಲಜಿ ಕೋರ್ಸ್ ನಲ್ಲಿ ಸ್ನಾತಕೋತ್ತರ ಪದವಿ  ಪೂರೈಸಿದರು.  ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನ ರೇಡಿಯಾಲಜಿ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್  ಆಗಿದ್ದಾರೆ.  ಗಾಯನ, ಬರೆಹ, ಚೆಸ್ ಆಡುವುದು, ಪ್ರವಾಸ ಇವರ ಹವ್ಯಾಸಗಳು.ಕನ್ನಡ ಸಾಹಿತ್ಯ ಓದು ನಿರಂತರವಾಗಿದ್ದು, ಇವರ ...

READ MORE

Related Books