ಸವತಿಯ ನೆರಳು

Author : ಆರ್‍ಯಾಂಬ ಪಟ್ಟಾಭಿ

₹ 99.00




Published by: ಪೂರ್ಣಿಮಾ ಪ್ರಕಾಶನ
Address: ಮೈಸೂರು.

Synopsys

ಲೇಖಕಿ ಆರ್ಯಾಂಬ ಪಟ್ಟಾಭಿ ಅವರ ಕಾದಂಬರಿ ಸವತಿಯ ನೆರಳು. 'ಸವತಿಯ ನರಳು' ಕಾದಂಬರಿ ರಚನೆಗೆ ಒಂದು ಆಂಗ್ಲ ಕಾದಂಬರಿಯ ಸ್ಪೂರ್ತಿ. ಓದುಗರಿಂದ ಮೆಚ್ಚುಗೆ ಪಡೆದ ಈ ಕಾದಂಬರಿಯನ್ನು 'ಓಂ ಶಕ್ತಿ ಆರ್ಟ್ಸ್' ಎಂಬ ಚಲನಚಿತ್ರ ಸಂಸ್ಥೆಯು ವೈ.ಆರ್. ಸ್ವಾಮಿಯವರ ನಿರ್ದೇಶನದಲ್ಲಿ ತೆರೆಯ ಮೇಲೆ ತಂದಿದೆ. ಹದಿನೆಂಟು ವರ್ಷದ ಪದ್ಮಿನಿ, ಸುಂದರಮ್ಮನವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಹುಡುಗಿ. ಮದ್ರಾಸಿನಲ್ಲಿ ವಾಸಿಸುವ ಸುಂದರಮ್ಮ ಶ್ರೀಮಂತ ಮಹಿಳೆ. ಮಕ್ಕಳಿಬ್ಬರೂ ಮದುವೆಯಾಗಿ ದೂರದ ಊರಿನಲ್ಲಿ ಇರುವುದರಿಂದ ಆಳುಗಳ ಸಹಾಯದಿಂದ ಬದುಕಬೇಕಾದ ಸ್ಥಿತಿ ಅವರದ್ದಾಗಿತ್ತು. ಬಹಳ ಶ್ರೀಮಂತನಾಗಿದ್ದ ಸೋದರಮಾವನ ಮಗ,ಹರ್ಷ ಮನೆಗೆ ಬಂದಾಗ ಸುಂದರಮ್ಮ ಸಡಗರಪಟ್ಟು ಉಪಚಾರ ಮಾಡುತ್ತಾರೆ. ಪದ್ಮಿನಿ ಮುಖಾಂತರ ಅವನಿಗೆ ಅಗತ್ಯವಿದ್ದ ಸೌಲಭ್ಯಗಳನ್ನು ಒದಗಿಸುತ್ತಾರೆ. ಹರ್ಷನ ಪತ್ನಿ ಇಂದಿರಾ ಒಂದು ವರ್ಷದ ಹಿಂದೆ ಸಮುದ್ರದಲ್ಲಿ ಮುಳುಗಿ ಸತ್ತ ವಿಷಯ ನೆನೆದು ದುಃಖಿಸುತ್ತಾರೆ. ಪರಿಹಾರವಾಗಿ ಮರುಮದುವೆ ಮಾಡಿಕೊಳ್ಳೆಂದು ಹರ್ಷನಿಗೆ ಸಲಹೆ ನೀಡುತ್ತಾರೆ. ಪದ್ಮಿನಿಯ ಸರಳ ರೂಪ, ಸಹಜ ವರ್ತನೆಯಿಂದ ಹರ್ಷ ಆಕರ್ಷಿತನಾಗುತ್ತಾನೆ. ಸುಂದರಮ್ಮನವರನ್ನು ಹೇಗೋ ಒಪ್ಪಿಸಿ ಪದ್ಮಿನಿಯನ್ನು ಕೂಡಲೆ ಮದುವೆ ಯಾಗುತ್ತಾನೆ. ಊಟಿಯಲ್ಲಿ ಸ್ವಲ್ಪ ದಿನವಿದ್ದು ಸುತ್ತಾಡಿದ ಮೇಲೆ ಕಲ್ಕತ್ತಾದಲ್ಲಿರುವ ತನ್ನ ಮನೆಗೆ ಅವಳನ್ನು ಕರೆದುಕೊಂಡು ಹೋಗುತ್ತಾನೆ. ಅನಾಥಳಾಗಿ‌ ಸುಂದರಮ್ಮನ ಮನೆಯಲ್ಲಿ ಬೆಳೆದ ಪದ್ಮಿನಿ ಗಂಡನ ಮನೆಯ ವೈಭವ ಕಂಡು ಬೆರಗಾಗುತ್ತಾಳೆ. ಅಲ್ಲಿಯ ರೀತಿನೀತಿಗಳನ್ನು ಅನುಸರಿಸಲು ಕಷ್ಟಪಡುತ್ತಾಳೆ. ತನ್ನೊಂದಿಗೆ ಗಂಡನ ಪ್ರೀತಿ ಇದೆ ಎಂಬ ಸಮಾಧಾನದಿಂದ ಇರುತ್ತಾಳೆ. ಅಲ್ಲಿರುವ ಆಳುಗಳೆಲ್ಲಾ ಪದ್ಮಿನಿಯ ಮುಂದೆ ಅವಳ ಸವತಿ ಇಂದಿರಾಳ ಅಪ್ರತಿಮ ಸೌಂದರ್ಯ, ವಿದ್ಯೆ ಮತ್ತು ಜಾಣ್ಮೆಯ ಬಗ್ಗೆ ಮಾತಾಡಿ ಅವಳಲ್ಲಿ ಕೀಳರಿಮೆಯನ್ನು ಹುಟ್ಟುಹಾಕುತ್ತಾರೆ. ಮುಖ್ಯವಾಗಿ ಮನೆಯ ಪೂರ್ಣ ಜವಾಬ್ದಾರಿ ಹೊತ್ತಿರುವ ಜಾನಕಮ್ಮ ಪದ್ಮಿನಿಯನ್ನು ಅಸಹನೆಯಿಂದ ನೋಡುತ್ತಾರೆ. ಅವರು ಇಂದಿರಾಳ ಸಾಕುತಾಯಿ ಆಗಿದ್ದರು. ಇಂದಿರಾಳ ಸ್ಥಾನದಲ್ಲಿ ಪದ್ಮಿನಿ ಹರ್ಷನೊಂದಿಗೆ ಸಂತೋಷದಿಂದ ಬದುಕುವುದು ಅವರಿಗೆ ಬೇಡವಾಗಿತ್ತು. ಅವರಿಬ್ಬರ ಮಧ್ಯೆ ವಿರಸ ಉಂಟುಮಾಡುವ ಪ್ರಯತ್ನಗಳನ್ನೂ ಜಾನಕಮ್ಮ ಮಾಡುತ್ತಾರೆ. ಇದರಿಂದ, ಹರ್ಷ ಸದಾ ಇಂದಿರಾಳ ನೆನಪಿನಲ್ಲಿ ಮುಳುಗಿದ್ದು ತನ್ನನ್ನು ಉಪೇಕ್ಷಿಸುತ್ತಾನೆ ಎಂಬ ಭಾವನೆ ಪದ್ಮಿನಿಯ ಮನದಲ್ಲಿ ಬೇರೂರುತ್ತದೆ. ಈ ಸಮಯದಲ್ಲಿ ಕಥೆಗೊಂದು ತಿರುವು!! ಸಮುದ್ರದ ತೀರದಲ್ಲಿ ಹೂತುಹೋದ ದೋಣಿಯೊಂದು ಪತ್ತೆ ಯಾಗಿ ಅದರಲ್ಲಿ ಜೀರ್ಣಾವಸ್ಥೆಯಲ್ಲಿರುವ ಶವ ಸಿಕ್ಕಿದ ಸುದ್ಧಿ ಬರುತ್ತದೆ. ಅಷ್ಟೇ ಅಲ್ಲ ಆ ಶವ ಪದ್ಮಿನಿಯ ಸವತಿ ಇಂದಿರಾಳದ್ದು ಎಂದೂ ಗೊತ್ತಾಗುತ್ತದೆ. ಪೋಲೀಸ್ ತನಿಖೆ ಶುರುವಾಗಿ ಎಲ್ಲರ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಒಂದು ವರ್ಷದ ಹಿಂದೆ ಹರ್ಷ, ಸಮುದ್ರದಲ್ಲಿ ಮುಳುಗಿದ್ದ ಒಂದು ಶವವನ್ನು ಕಂಡು ತನ್ನ ಪತ್ನಿಯದ್ದೆಂದು ಗುರುತಿಸಿದ್ದ. ಅಲ್ಲಿಗೆ ಆ ವಿಷಯ ಅಪಘಾತವೆಂಬ ಹೆಸರಿನಲ್ಲಿ ಮುಚ್ಚಿ ಹೋಗಿತ್ತು. ಆದರೀಗ ಹೊಸ ಸಮಸ್ಯೆ ಉಂಟಾಗಿತ್ತು. ಇಂದಿರಾ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣೇ ಅಲ್ಲವೆಂದು ಜಾನಕಮ್ಮ ಹೇಳಿಕೆ ನೀಡುತ್ತಾರೆ. ಅವರ ಸಂಬಂಧಿ ದಿನೇಶನೂ ಬಂದು ಇದು ಕೊಲೆಯೆಂದು ವಾದಿಸುತ್ತಾನೆ. ಮುಂದೇನಾಯಿತು? ಅದನ್ನು ತಿಳಿಯಲು ನೀವು ಈ ಕಾದಂಬರಿಯನ್ನು ಓದಲೇಬೇಕು. ಲೇಖಕಿ ಈ ಕಾದಂಬರಿಯನ್ನು ಸಮರ್ಥವಾಗಿ ಬರೆದು ಕಡೆಯವರೆಗೂ ಕುತೂಹಲ ಉಳಿಯುವಂತೆ ಮಾಡಿದ್ದಾರೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books