ಕಾರ್ಮುಗಿಲ ತಾರೆ ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ವಿದ್ಯಾಭ್ಯಾಸದಲ್ಲಿ ಮಹತ್ಸಾಧನೆಯನ್ನೇ ಗುರಿಯನ್ನಾಗಿ ಇಟ್ಟುಕೊಂಡ ಅನೇಕ ಪೋಷಕರು ಮಕ್ಕಳನ್ನು ಮಾರ್ಕ್ಸ್ ತೆಗೆಯುವ ಮೆಷೀನ್‌ಗಳನ್ನಾಗಿ ಬೆಳೆಸುತ್ತಿರುವುದು ಒಂದು ವಿಪರ್ಯಾಸ: ಮಕ್ಕಳು ಸಾಧನೆಯತ್ತ ಸಾಗಬೇಕಾದರೆ ಅವರ ಆಸೆ ಹಾಗೂ ಧ್ಯೋಯಗಳು ಮಾರ್ಗದಲ್ಲಿ ಅವರನ್ನು ಹುರಿದುಂಬಿಸಿದರೆ ಆ ಮಕ್ಕಳು ಮುಂದೆ ದೇಶದ ಸತ್ಪ್ರಜೆಯಾಗುವುದರಲ್ಲಿ ಅನುಮಾನವಿಲ್ಲ. ದಾಂಪತ್ಯದಲ್ಲಿ ಗಂಡು ಹೆಣ್ಣು ಎರಡು ರೇಖೆಗಳಾಗಿದ್ದರೂ ಒಂದು ಹಂತದಲ್ಲಿ ಆ ರೇಖೆಗಳೆರಡು ಸೇರಿದರೆ ಅದು ಅನುರೂಪ ದಾಂಪತ್ಯವಾಗುತ್ತದೆ. (ಬೆನ್ನುಡಿ)
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE