ತಾಪದಿಂದ ತಂಪಿಗೆ

Author : ಎಂ.ಕೆ. ಇಂದಿರಾ

₹ 98.00




Year of Publication: 1968
Published by: ಎಸ್. ಆರ್ ಪ್ರಕಾಶನ

Synopsys

ಕಥೆಗರ್ತಿ, ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಕಿರುಕಾದಂಬರಿ‌ ‘ತಾಪದಿಂದ ತಂಪಿಗೆ’. ಸಾಮಾನ್ಯವಾಗಿ ಮಹಿಳಾಸಾಹಿತಿಗಳ ಕೃತಿಗಳಲ್ಲಿ ಕಂಡುಬರುವ ವಸ್ತುವಿಷಯ ಎಂದರೆ ಹೆಣ್ಣಿನ ಭಾವನೆಗಳು, ಹೆಣ್ಣಿನ ಸಮಸ್ಯೆಗಳು ಶೋಷಣೆ ತ್ಯಾಗ ಇತ್ಯಾದಿ. ಆದರೆ ಈ ಕೃತಿ ತುಸು ಭಿನ್ನವಾಗಿದೆ.

ಹೆಣ್ಣಿನಿಂದ ಮೋಸಹೋಗಿ ನೆಮ್ಮದಿ ಹಾಳುಮಾಡಿಕೊಳ್ಳುವ ಯುವಕನ ಕಥೆ ಇದು. ಆಕ್ರೋಶ, ಹತಾಶೆಗಳು ವಿಜೃಂಭಿಸದೆ ಆಶಾವಾದ ಹಾಗೂ ತಪ್ಪನ್ನುತಿದ್ದಿಕೊಂಡು ಬಾಳನ್ನು ಸರಿಪಡಿಸಿಕೊಳ್ಳುವ ಕಥಾ ಹಂದರವಿದೆ. ಬೆಂಗಳೂರಿನ ವಾತಾವರಣಕ್ಕೂ ಗ್ರಾಮೀಣ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸವಿದ್ದರೂ ಬೆಂಗಳೂರಿನಲ್ಲಿ ಇದ್ದೂ ಯಾವುದೇ ಮೋಜು ದುಷ್ಚಟಗಳಿಗೆ ಬಲಿಯಾಗದೆ ಗುರಿ ಸಾಧಿಸುವವನ ಚಿತ್ರಣವೂ ಇದೆ.

ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಸ್ವಸ್ಥತೆಯಿಂದ ಗುಣಮುಖನಾಗುವ ನಗರನಿವಾಸಿಯ ಚಿತ್ರಣವೂ ಇದೆ. ಜಗನ್ಭೋಹಿನಿಯ ಶ್ವೇತಾಂಬರ ಹರಡಿದಂತೆ ಧರೆಗೆಲ್ಲ ಪಸರಿಸಿದ ತಿಂಗಳ ಕಾಂತಿ ಪ್ರೇಮಿಗಳಿಗೆ ವಿಲಾಸಿಗಳಿಗೆ ತಾನಾಗಿ ಒದಗಿ ಬಂದ ಅಮೃತ ಮಹೂರ್ತ ಹೊರಗಿನ ಚಂದ್ರಕಿರಣಗಳಿಗೆ ತೆಳುನೀಲಿಯ ತೆರೆ ಎಳೆದಂತೆ ಮಹಲಿನ ತುಂಬೆಲ್ಲ ಕೊಳವೆ ದೀಪಗಳು ಮೋಹಕ ಬೆಳಕನ್ನು ತುಂಬಿವೆ. ನೂರಾರು ಜನರ ಓಡಾಟವಿದ್ದರೂ ಅರ್ಥವಾಗದ ಒಂದು ಗಂಭೀರ ಶಾಂತಿ ಎನ್ನುವ ಸಾಲುಗಳಿಂದ ಹೋಟೆಲ್ ಅಪ್ಸರಾವನ್ನು ವರರ್ಣಿಸುತ್ತಾ ಆರಂಭವಾಗುವ ಕಥೆ ಬಹಳ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಕರ್ಮವೀರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದ್ದರೂ1972, 1974 1977 ಗಳಲ್ಲಿ ಮರುಮುದ್ರಣಗೊಂಡ ಕೃತಿ ಇದು.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books