ಕೇವಲ ಮನುಷ್ಯರು

Author : ಶಿವರಾಮ ಕಾರಂತ

Pages 332

₹ 120.00

Buy Now


Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಸಾಂಸಾರಿಕ ಜಂಜಡದಿಂದ ಆಚೆಗೆ ಬಂದ ವ್ಯಕ್ತಿಯೊಬ್ಬ ಮತ್ತೆ ಮನುಷ್ಯ ಸಹಜ ದೌರ್ಬಲ್ಯಕ್ಕೆ ಒಳಗಾಗಿ, ಬಳಿಕ ಆತ್ಮಶೋಧನೆ  ಮಾಡಿಕೊಂಡು ನಿಷ್ಕಪಟತನದಿಂದ ನಡೆದುಕೊಂಡ ನಿದರ್ಶನದ ಕಥಾವಸ್ತುವೇ ಈ ಕಾದಂಬರಿ. 

ಹಯವದನರಾಯರು ಸಿವಿಲ್ ಎಂಜಿನಿಯರರು. ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೀಮೆಯವರೆಗೂ ಸೇವೆ ಸಲ್ಲಿಸಿ ನಿವೃತ್ತನಾಗುತ್ತಾನೆ. ವಿಶ್ರಾಂತ ಜೀವನ ಕಳೆಯುವುದೆಲ್ಲಿ ಎಂಬುದು ಅವರ ಚಿಂತೆ. ಆದರೆ, ಹಯವದನರಾಯರ ಪತ್ನಿಗೆ ‘ಗಂಡನಿಗೆ ಬದುಕಿನಲ್ಲಿ ಸಂತೋಷಪಡುವ ಆತುರವೇ ಇಲ್ಲ. ಅವರ ಜೀವನವೆಲ್ಲ ದುಡಿಯುವುದರಲ್ಲಿ, ಹಣ ಮಾಡುವುದರಲ್ಲಿ ಕಳೆದು ಬರಡಾಯಿತು’ ಎಂಬ ಭಾವ.  ಉಡುಪಿಯಲ್ಲಿ ವಕೀಲನಾಗಿದ್ದ ತಮ್ಮ ಸಹೋದರ ದಾಸಣ್ಣನನ್ನು ಕಾಣುವ ನೆಪದಿಂದ, ಅಲ್ಲಿಯೇ ಮನೆ ಮಾಡಿಕೊಂಡಿದ್ದ. ಮೊದಲು ತಮ್ಮನ ಮನೆಯಿಂದ ಊಟ ಬರುತ್ತಿತ್ತು. ನಂತರ, ಅಡುಗೆಗಾಗಿ ಒಬ್ಬ ಹೆಂಗಸನ್ನು ಗೊತ್ತುಪಡಿಸಿದರು. ಅವಳ ಹೆಸರು ಕಾವೇರಿ; ಅವಳು ವಿಧವೆ. ಆದ್ದರಿಂದ, ಅವಳನ್ನು ಹಯವದನರಾಯರು ತಮ್ಮ ಭಾವಜೀವನಕ್ಕೆ ಬಳಸಿಕೊಳ್ಳುತ್ತಾರೆ. 

ಜ್ಞಾನಮಾರ್ಗದ ಪ್ರವರ್ತಕ ಅಭಿನ್ನಾನಂದರ ಬಗ್ಗೆ ಹಯವದನರಾಯರಿಗೆ ತುಂಬಾ ಗೌರವ. ವಿಶ್ವನಾಥಯ್ಯನವರ ಪತ್ನಿ ಶಾಂತೆಯೊಂದಿಗೆ ಅನೈತಿಕ ಸಂಬಂಧವಿತ್ತು. ಗಂಡನಿಗೆ ಸಂಶಯ ಬರಬಾರದೆಂದು ವಿಶ್ವನಾಥಯ್ಯನನ್ನು ಆಗಾಗ ಹಾಸಿಗೆಗೆ ಬರಮಾಡಿಕೊಳ್ಳುತ್ತಾಳೆ.  ಆದರೂ ಗರ್ಭ ನಿಲ್ಲದು. ಒಂದು ದಿನ ಸ್ವಾಮೀಜಿಯೊಂದಿಗಿದ್ದಾಗ ಶಾಂತೆಯನ್ನು ವಿಶ್ವನಾಥಯ್ಯ ಕಾಣುತ್ತಾನೆ. ಈ ಸಂಗತಿ ಬಹಿರಂಗವಾಯಿತೆಂದು ಹೆದರಿದ ಸ್ವಾಮೀಜಿ, ‘ಭಕ್ತಿಯು ಭಕ್ತಿಗಷ್ಟೇ ಸೀಮಿತವಾಗಬೇಕು’ ಎಂಬ ಸಂದೇಶ ನೀಡುತ್ತಾನೆ. ತನ್ನದು ಅತಿರೇಕದ ವರ್ತನೆಯಾಯಿತೆಂದು ಕ್ಷಮೆ ಕೋರುತ್ತಾಳೆ ಶಾಂತೆ, ಅದೇ ರೀತಿ, ಮನೆಗೆ ಬಂದು ಸ್ವಾಮೀಜಿ ಕ್ಷಮಿಸಿದಂತೆ ತಾವೂ ಸಹ ಕ್ಷಮಿಸುವಂತೆ ಬೇಡುತ್ತಾಳೆ.   

ಸ್ವಾಮೀಜಿಯ ಜ್ಞಾನಮಂದಿರ ಸಿದ್ಧಗೊಂಡು ಅದರ ಉದ್ಘಾಟನೆಗೆ ಸಾಕಷ್ಟು ಜನ ಸೇರಿರುತ್ತಾರೆ. ಸಭಿಕರಲ್ಲಿ ವಿದೇಶೀಯರೂ ಇರುತ್ತಾರೆ. 'ಈಗ ಹಯವದನರಾಯರೂ ಇರುತ್ತಾರೆ. ಅಭಿನ್ನಾನಂದರು ಮಾತನಾಡಿ ‘ ಅಭಿನ್ನಾನಂದ ಎಂದು ತನ್ನ ಖುಷಿಗೆ ತಾನೇ ಹೆಸರಿಸಿಕೊಂಡ ನಿಮ್ಮಂತೆಯೇ ವಿಧಗಳಲ್ಲೂ ಇರುವ, ಭಗವಾನ್ ಅಲ್ಲವೇ ಅಲ್ಲದ ಒಬ್ಬ ವ್ಯಕ್ತಿ ನಾಲ್ಕು ಮಾತುಗಳನ್ನು ಕೇಳುತ್ತಾನೆ’ ಎಂದು ಸ್ವಾಮೀಜಿ ತಮ್ಮ ಪ್ರಾಸ್ತಾವಿಕ ಭಾಷಣವನ್ನು ಆರಂಭಿಸಿ, ಸುತ್ತಲಿನ ಬದುಕಿನೊಂದಿಗೆ ಉತ್ತಮ ಸಂಬಂಧವನ್ನಿರಿಸಿಕೊಂಡು ಬಾಳುವುದೇ ಉತ್ತಮ ಮಾರ್ಗವೆಂದು ತಿಳಿಸುತ್ತಾರೆ. ಆತ್ಮ, ಪರಮಾತ್ಮ , ಹುಟ್ಟು , ಸಾವುಗಳಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿ, ನಂಬಿಕೆಯಿಂದ ಜಡ್ಡುಗಟ್ಟಿದ ಮನಸ್ಸುಗಳಿಗೆ ಬಿಸಿಯಾದ ವೈಚಾರಿಕತೆಯ ಶಾಖವನ್ನು ಕೊಡುತ್ತಾರೆ. ಈ ಸಂಭಾಷಣೆ ನಡೆಯುತ್ತಿರುವಾಗ ಶಾಂತಿ ಪೆಚ್ಚುಮೋರೆ ಹಾಕಿಕೊಂಡು ಅವರ ಮುಖವನ್ನೇ ನೋಡುತ್ತಾಳೆ. ಇತರ ಸಭಿಕರೂ ಅಚ್ಚರಿಗೊಳ್ಳುತ್ತಾರೆ. ಇಲ್ಲಿಗೆ ಕಾದಂಬರಿ ಮುಕ್ತಾಯಗೊಂಡು, ಪ್ರದರ್ಶನಕಾರರಿಗೆ ಮಾತ್ರ ಈ ಜಗದಲ್ಲಿ ಕಿಮ್ಮತ್ತು ಇದೆ ಎಂಬ ಸಂದೇಶ ನೀಡುವ ಮೂಲಕ ಸ್ವಾರ್ಥಪರರ ಬದುಕನ್ನು ಅನಾವರಣಗೊಳಿಸುತ್ತದೆ. 

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1971ರಲ್ಲಿ (ಪುಟ: 332) ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books