‘ಭಗ್ನಸ್ವಪ್ನ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಬೆನ್ನುಡಿಯಲ್ಲಿ ಹೀಗೆ ವಿಶ್ಲೇಷಿಸಲಾಗಿದೆ: `ಡಾ. ಕೃಷ್ಣಾನಂದ ಕಾಮತರು ಕನ್ನಡ ಪ್ರವಾಸ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಲೇಖಕರು. ಜೊತೆಗೆ ವಿದೇಶಕ್ಕೆ ತೆರಳಿ ಅಧ್ಯಯನದ ಬಳಿಕ ಭಾರತಕ್ಕೆ ಹಿಂದಿರುಗಿದ ವಿಜ್ಞಾನಿಗಳಲ್ಲಿ ವಿರಳರು, ಭಾರತೀಯ ಪರಿಸರದಲ್ಲಿ ಹೀಗೆ ಹಿಂತಿರುಗಿದ ವಿಜ್ಞಾನದ ಪದವೀಧರನೋರ್ವ, ಅಸಹಾಯಕ, ಅನಾಥಪ್ರಜ್ಞೆ ಅನುಭವಿಸುತ್ತಾನೆಂಬ ಕಟು ವಾಸ್ತವದ ಅನುಭವವನ್ನು 'ಭಗ್ನ ಸ್ವಪ್ನ’ ದಲ್ಲಿ ಎತ್ತಿಕೊಳ್ಳುತ್ತಾರೆ. ಒಂದೆಡೆ ಪ್ರತಿಭಾ ಪಲಾಯನವಾಗುತ್ತದೆ ಎಂದು ಹೇಳುವ ರಾಜಕಾರಣಿಗಳಾಗಿ ಜನ ಮಾಡುವ ಅನ್ಯಾಯ, ನೀಚತನಗಳಿಗೆ ಇಲ್ಲಿ ಸೃಜನಾತ್ಮಕ ರೂಪ ನೀಡುತ್ತಾರೆ. ಕೃಷ್ಣಾನಂದರ ಕಾದಂಬರಿ ಓದುವಾಗ ಅದು ಅವರ ಜೀವನದ ಒಂದು ಭಾಗವಾಗಿರುವಂತೆ ತುಂಬ ಆಪ್ತವಾದ ಅನುಭವವನ್ನು ನೀಡುತ್ತದೆ. ವಿಜ್ಞಾನಿಗಳಿಗೆ, ಬೌದ್ಧಿಕ ಸಾಧನೆ ಮಾಡುವವರಿಗೆ, ಅಮೇರಿಕಾ ಬರಮಾಡಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದೆ. ಭಾರತದಲ್ಲಿ ವಿಜ್ಞಾನಿಯಾಗಿ ಕಲಿತ ವಿದ್ಯೆಯನ್ನು ಕ್ರಿಯಾಶೀಲಗೊಳಿಸುವದು, ಸಾಧ್ಯವಿಲ್ಲವೆಂಬ ಕಟುವಾಸ್ತವವನ್ನು ಕಾಮತರ ಕಾದಂಬರಿ ನಮಗೆ ತಿಳಿಸುತ್ತದೆ. ಆದರ್ಶ ಮತ್ತು ವಾಸ್ತವಗಳ ಸೇತುವೆಯಾಗಿ ಪ್ರತಿಭಾ ಪಲಾಯನಕ್ಕೆ ಕಾರಣವಾದ ಘಟನೆ, ಸನ್ನಿವೇಶಗಳನ್ನು ಸಾಮಾಜಿಕ ನೆಲೆಯಲ್ಲಿ ಶೋಧಿಸುವ 'ಭಗ್ನ ಸ್ವಪ್ನ' ಈ ನಿಟ್ಟಿನಲ್ಲಿ, ನಾವು ಚಿಂತಿಸುವಂತೆ ಮಾಡುತ್ತದೆ. 'ಭಗ್ನ ಸ್ವಪ್ನ' ಕೃಷ್ಣಾನಂದರ ವೈಯಕ್ತಿಕ ಬದುಕಿನ ನೋವನ್ನು ಸೃಜನಶೀಲವಾಗಿಸಿದ ಕಾದಂಬರಿಯಾಗಿದೆ ಎಂದು ಪ್ರಸ್ತಾಪಿತವಾಗಿದೆ.
ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...
READ MORE