‘ಅಂಜಿಕಿನ್ಯಾತಕಯ್ಯಾ’ ಕೃತಿಯು ಕಾಮರೂಪಿ ಅವರ ಕಾದಂಬರಿಯಾಗಿದೆ. ಈ ಕೃತಿಯು ಧಾರ್ಮಿಕ ವಿಚಾರಗಳನ್ನು ಒಳಗೊಂಡಿದ್ದು, ಜನರಲ್ಲಿ ದೈವನಂಬಿಕೆಯ ಕುರಿತಿರುವ ವಿಚಾರವನ್ನು ವಿಶ್ಲೇಷಿಸುತ್ತದೆ. ಲೇಖಕರು ಇಲ್ಲಿ ತಾವು ಕಂಡಿರುವ ಘಟನೆಗಳನ್ನು ಹಾಗೂ ಜನರು ನಂಬಿರುವ ವಿಚಾರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಎಂ.ಎಸ್. ಪ್ರಭಾಕರ ಅವರು ಕಾಮರೂಪಿ ಎಂಬ ಕಾವ್ಯನಾಮದಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಟಹಳ್ಳಿ ಸೂರಪ್ಪ ಪ್ರಭಾಕರ. ಹುಟ್ಟಿದ್ದು 1936ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. 1962 ರಿಂದ 1965ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರೀಡರ್ ಆಗಿದ್ದ ಇವರು, 1975ರಿಂದ 1983ರವರೆಗೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ ಹಿಂದೂ ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ...
READ MORE