ಲೇಖಕ ಅರುಣ್ ಕಿಲ್ಲೂರು ಅವರ ಕಾದಂಬರಿ ಫೀನಿಕ್ಸ್. ಜಾತಿ ಮೀರಿ ಪ್ರೀತಿ ಗೆಲ್ಲಲು ಹೊರಡುವ ಪ್ರೇಮಿಗಳ ಕಥೆ ಇಲ್ಲಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗದೆ ಹೋದಾಗ ಕಥಾ ನಾಯಕ ಆಯ್ದುಕೊಳ್ಳುವ ಭಿನ್ನ ದಾರಿ ಕಾದಂಬರಿಯಲ್ಲಿ ಚಿತ್ರಣ ಆಗಿದೆ. ಅವರವರ ಭಾವಕ್ಕೆ ಪ್ರೀತಿಯ ವ್ಯಾಖ್ಯಾನ ಭಿನ್ನ. ಪ್ರೀತಿಯ ಬಗ್ಗೆ ಕಾದಂಬರಿಯ ಕಥಾ ನಾಯಕನ ವ್ಯಾಖ್ಯಾನವನ್ನು ಓದಿಯೇ ತಿಳಿಯಬೇಕು. ಕಾದಂಬರಿಯಲ್ಲಿ ಪತ್ರಿಕೋದ್ಯಮ, ತತ್ವಶಾಸ್ತ್ರದ ವಿಷಯಗಳು ಹಾಸು ಹೊಕ್ಕಿವೆ. ಕಾದಂಬರಿ ಮಡಿಕೇರಿಯಲ್ಲಿ ಕಥಾ ನಾಯಕನನ್ನು ನಿರೂಪಕ ಭೇಟಿ ಆಗುವ ಮೂಲಕ ಆರಂಭ ಆಗುತ್ತದೆ. ಕಥಾ ನಾಯಕ ತನ್ನ ಜೀವನದಲ್ಲಿ ನಡೆದ ಪ್ರೀತಿಯ ನೋವಿನ ಕಥೆಯನ್ನು ಹೇಳುತ್ತಾ ಸಾಗುತ್ತಾನೆ. ಕಥಾ ನಾಯಕ ಕೊನೆಗೆ ಪ್ರೀತಿಯನ್ನು ಹೇಗೆ ಗೆಲ್ಲುತ್ತಾನೆ ಎನ್ನುವುದು ನಿರೂಪಕನಿಗೆ ಗೊತ್ತಾಗುವ ಮೂಲಕ ಕಾದಂಬರಿ ಮುಕ್ತಾಯ ಆಗುತ್ತದೆ. ಕಾದಂಬರಿಯ ಅಂತ್ಯ ಮದುವೆಯ ಬಗ್ಗೆ ಸಾಮಾಜಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಪರಿಹಾರ ಒದಗಿಸುವ ರೀತಿಯಲ್ಲಿ ಮುಕ್ತಾಯ ಕಾಣುತ್ತದೆ. ಓದುಗರಿಗೆ ಕಾದಂಬರಿ ಪ್ರೀತಿಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ.
ಅರುಣ್ ಕಿಲ್ಲೂರು ದಕ್ಷಿಣ ಕನ್ನಡದವರು. ದಶಕಕ್ಕೂ ಹೆಚ್ಚಿನ ಕಾಲ ರಾಜ್ಯ ಮಟ್ಟದ ಹಲವು ಪತ್ರಿಕೆಗಳಲ್ಲಿ ವರದಿಗಾರ ಆಗಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಲವು ಪತ್ರಿಕೆಗಳಲ್ಲಿ ಲೇಖನ, ಕಥೆ, ಸಾಹಿತ್ಯ ಬರಹ ಪ್ರಕಟ ಆಗಿವೆ. ...
READ MORE