ಹೆಸರಾಂತ ಕಾದಂಬರಿಕಾರ ತ.ರಾ.ಸು. ಅವರ ಕಾದಂಬರಿ-ಆಕಸ್ಮಿಕ. ಈ ಕಾದಂಬರಿಯಲ್ಲಿ ಆಕಸ್ಮಿಕ, ಅಪರಾಧಿ ಹಾಗೂ ಪರಿಣಾಮ ಈ ಮೂರೂ ಶೀರ್ಷಿಕೆಯ ಮೂರು ಕಾದಂಬರಿಗಳನ್ನು ಅಡಕಗೊಳಿಸಿದೆ. ಆಕಸ್ಮಿಕ ಕಾದಂಬರಿಯು ಕನ್ನಡ ಚಲನಚಿತ್ರವೂ ಆಯಿತು. ಇಲ್ಲಿ ಬರುವ ಇಂದಿರಾ, ಕ್ಲಾರಾ, ವ್ಯಾಸರಾಯ, ಮೂರ್ತಿ ಇತ್ಯಾದಿ ಪಾತ್ರಗಳು ಕಾದಂಬರಿಯ ಮೌಲ್ಯವನ್ನು ತಮ್ಮ ತಮ್ಮ ಮಿತಿಯಲ್ಲಿ ಹೆಚ್ಚಿಸುತ್ತವೆ. ಬದುಕಿನಲ್ಲಿ ಘಟಿಸುವ ಬಹುತೇಕ ಘಟನೆಗಳು ಆಕಸ್ಮಿಕವಲ್ಲ; ಅವು ನಿರೀಕ್ಷಿತವೂ ಆಗಿರುತ್ತವೆ. ಅದನ್ನು ಎದುರಿಸುವ ಪೂರ್ವ ಸಿದ್ಧತೆ ಇಲ್ಲದ್ದರಿಂದ, ಆಕಸ್ಮಿಕ ಎಂಬ ನೆಪ ಹೇಳುತ್ತೇವೆ. ನಮ್ಮ ದೌರ್ಬಲ್ಯಗಳನ್ನು ಮರೆ ಮಾಚಲು ಸಹ ‘ಆಕಸ್ಮಿಕ’ದ ನೆರವು ಪಡೆಯುತ್ತೇವೆ. ದೈಹಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಪಡುವ ಪ್ರಯತ್ನ, ಬಹುತೇಕ ವೇಳೆ ಮಾನಸಿಕ ದೌರ್ಬಲ್ಯದಿಂದ ನರಳುತ್ತಾ ಬದುಕು ಕಳೆಯುವುದು., ಅಂತಿಮ ದಿನಗಳಲ್ಲಿ ಪಶ್ಚಾತ್ತಾಪದ ಹೀಗೆ ಎಲ್ಲವೂ ಆಕಸ್ಮಿಕವಾಗೇ ಜರುಗುವ ಘಟನೆಗಳೆಂಬಂತೆ ಕಾಣುತ್ತವೆ. ಆದರೆ, ಬಹುತೇಕ ಘಟನೆಗಳು ಆಕಸ್ಮಿಕವಾಗಿರುವುದಿಲ್ಲ ಎಂಬ ಸಂದೇಶದ ಕಾದಂಬರಿ ಇದು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE