ಗೊಲ್ಲು ಗುಡಿಪಟ್ಟಿ-ಎಂಬುದು ಎಲ್. ಸುಮಂತ್ ಮಂಗನಹಳ್ಳಿ ಅವರು ಬರೆದ ಕಿರು ಕಾದಂಬರಿ. ಸಮಾಜದಲ್ಲಿ ದುಷ್ಕರ್ಮಿಗಳು ಮಾರಾಟ ಮಾಡುವ ಕಳ್ಳಭಟ್ಟಿ, ನಕಲಿ ಮದ್ಯ , ಗಾಂಜಾ, ಹೆರಾಯಿನ್ ಇತ್ಯಾದಿ ವಿರುದ್ಧ ಅಬಕಾರಿ ಸಿಬ್ಬಂದಿಗಳ ಹೋರಾಟದ ಬದುಕನ್ನು ಈ ಕಾದಂಬರಿ ಚಿತ್ರಿಸುತ್ತದೆ. ಮಾನವನ ಜೀವಕ್ಕೆ ಅಪಾಯವನ್ನುಂಟು ಮಾಡುವ ನಿಷೇಧಿತ ಮಾದಕ ವಸ್ತುಗಳ ಉತ್ಪಾದನೆ ಮಾರಾಟವನ್ನು ನಿಯಂತ್ರಿಸಲು ರಾತ್ರಿ ಹಗಲು ಎನ್ನದೇ ನಿರಂತರವಾಗಿ ಎಲೆಮರೆಕಾಯಿಯಂತೆ ದುಡಿದು ಸಮಾಜದ ಆರೋಗ್ಯ ಕಾಪಾಡಿ ಯುವಜನರ ಅಮಾಯಕರ ಜೀವ ಕಾಪಾಡುತ್ತಿರುವ ಅಬಕಾರಿ ಇಲಾಖೆಯ ಪರಿಶ್ರಮದ ಘಟನೆಗಳು , ಡ್ರಗ್ಸ್ ದಂಧೆ ಮಾಡುವ ದುಷ್ಕರ್ಮಿಗಳನ್ನು ಸದೆಬಡಿಯುವ ಅಬಕಾರಿ ಅಧಿಕಾರಿ- ಸಿಬ್ಬಂದಿಗಳ ಸಾಹಸಗಳ ರೋಚಕ ಕಥಾನಕವಿದು. ಜೊತೆಗೆ ಕಾಲೇಜು ದಿನಗಳ ಹಾಸ್ಯ ಸನ್ನಿವೇಶಗಳ ಚಿತ್ರಣ, ಪ್ರೇಮಕಥೆ, ಕೌಟುಂಬಿಕ ಕಥಾನಕ ಹಾಗೂ ಮಾಂಸದ ಆಸೆಬುರುಕ ನಾಗಯ್ಯ ಮಾಂಸ ತಿನ್ನಲು ಒದ್ದಾಡುಡುವ ಪ್ರಸಂಗ ಇತ್ಯಾದಿ ಓದುಗರ ಕುತೂಹಲ ಕೆರಳಿಸುತ್ತವೆ.
ಲೇಖಕ ಎಲ್ ಸುಮಂತ್ ಮಂಗನಹಳ್ಳಿ ಅವರು ಮೂಲತಃ ಬೆಂಗಳೂರಿನ ಸೂಲಿಕೆರೆಯ ಮಂಗನಹಳ್ಳಿ ಗ್ರಾಮದವರು. ಎಂ.ಎ. ಪದವೀಧರರು. ಅಬಕಾರಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರು. ಇವರ ಆಸಕ್ತಿಯ ಕ್ಷೇತ್ರ ವ್ಯವಸಾಯ ಹಾಗೂ ಸಾಹಿತ್ಯ. ಇವರು ಬರೆದ ಕವನ, ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಗೊಲ್ಲಗುಡಿಪಟ್ಟಿ (ಕಿರು ಕಾದಂಬರಿ) ...
READ MORE