‘ತಿರುಗಿದ ಚಕ್ರ’ ಲೇಖಕಿ ಎ.ಪಿ. ಮಾಲತಿ ಅವರ ಕಾದಂಬರಿ. ಕೌಟುಂಬಿಕ ಕ್ಷೇತ್ರದಲ್ಲಿ ಅತ್ತೆ-ಸೊಸೆಯ ಸಂಬಂಧ ಹೆಚ್ಚು ಅರ್ಥಪೂರ್ಣವಾದದ್ದು, ಪರಸ್ಪರ ಒಲವು, ವಿಶ್ವಾಸ, ಪ್ರೀತಿ, ಆತ್ಮೀಯತೆ ಇದ್ದರೆ ಈ ಸಂಬಂಧ ಮಧುರವಾಗಿ ಜೀವಿತಕ್ಕೆ ಸಾರ್ಥಕತೆ ಬರುತ್ತದೆ. ಹೆಚ್ಚಿನ ಸಂಸಾರಗಳಲ್ಲಿ ಅತ್ತೆ-ಸೊಸೆ ಹೊಂದಿಕೊಂಡು ಸುಖ ಸಂತೃಪ್ತಿಯಿಂದ ಬಾಳುವುದನ್ನು ನೋಡಿದ್ದೇವೆ. ಆದರೆ ಕೆಲವು ಕಡೆ ವೃದ್ಧಾಪ್ಯದಲ್ಲಿ ಮಗನ ಆಸರೆಯಿಂದ ವಂಚಿತರಾಗಿ ಬದುಕುವ ಮಹಿಳೆಯರ ಬದುಕು ಕಾಡುತ್ತದೆ. ಈ ಎಲ್ಲಾ ಸೂಕ್ಷ್ಮಪ್ರಜ್ಞೆಗಳೊಂದಿಗೆ ಹೆಣೆದಿರುವ ಈ ಕಾದಂಬರಿ ಸಾಮಾಜಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತದೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE