ಆಕ್ರಂದನ

Author : ಡಿ ಎನ್. ಕೃಷ್ಣಮೂರ್ತಿ

Pages 260

₹ 0.00




Year of Publication: 2021
Published by: ಪುನಶ್ಚೇತನ ಪ್ರಕಾಶನ
Address: ದೊಡ್ಡಮಾರಗೌಡನಹಳ್ಳಿ, ಮೈಸೂರು ತಾಲ್ಲೂಕು, ಮೈಸೂರು -570026
Phone: 9008149968

Synopsys

ಇದೊಂದು ಮಹಿಳಾ ಪ್ರಧಾನ ಕಾದಂಬರಿ. ಈ ಕಾದಂಬರಿಯ ಕಥಾನಾಯಕಿಯರು ತಾಯಿ ಯಶೋದ ಮತ್ತು ಮಗಳು ನಂದಿತ. ಯಶೋದಾಳ ಗಂಡ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಖಾನೆ ನಿಂತು ಹೋದ ಕಾರಣದಿಂದ ಅಕಾಲಿಕ ಸಾವಿಗೀಡಾಗುತ್ತಾನೆ. ಯಶೋದಾಳಿಗೆ ಗಂಡನ ಸಾವಿನ ಚಿಂತೆ ಒಂದೆಡೆಯಾದರೆ ಮಕ್ಕಳನ್ನು ಸಾಕಿ ಬೆಳೆಸಬೇಕಾದ ಹೊಣೆಗಾರಿಕೆ ಇನ್ನೊಂದೆಡೆ. ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾನಾ ರೀತಿಯ ಸಮಸ್ಯೆಗಳು ಅವಳನ್ನು ಇನ್ನಿಲ್ಲದಂತೆ ಕಾಡುತ್ತವೆ. ಆಕೆ ಹೆತ್ತ ಮಗಳು ನಂದಿನಿ ಮೂಕಿಯಾದುದರಿಂದ ಆಕೆ ಇನ್ನಷ್ಟು ಕಂಗಾಲಾಗುತ್ತಾಳೆ. ಜನ್ಮ ಕೊಟ್ಟ ಮಗ ದಾರಿ ತಪ್ಪಿರುತ್ತಾನೆ. ಅಪ್ಪನ ಅಕಾಲಿಕ ಮರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ನಂದಿನಿ ದಾರಿ ತಪ್ಪಿರುವ ಅಣ್ಣನ ನಡವಳಿಕೆಯಿಂದ ಜರ್ಜರಿತಳಾಗಿ ದಿನಬೆಳಗಾದರೆ ಕಣ್ಣೀರಿನಲ್ಲಿ ಕೈತೊಳೆಯುತ್ತಾಳೆ. ಅಂತಹ ಸಾಂಸಾರಿಕ ಬದುಕಿನ ದುರಂತ ಕಥೆಯೇ ಈ ಆಕ್ರಂದನ ಕಾದಂಬರಿ.

About the Author

ಡಿ ಎನ್. ಕೃಷ್ಣಮೂರ್ತಿ
(04 June 1963)

ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ  ಇವರು  ಡಿಎನ್ಕೆ ಎಂದೇ ಪರಿಚಿತರು.  ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...

READ MORE

Related Books