ದಟ್ಟ ಜೀವನಾನುಭವಗಳಿಂದ ತುಂಬಿರುವ ಕೃತಿ `ಭೂಮಿ’. ಲೇಖಕ-ಕಂನಾಡಿಗಾ ನಾರಾಯಣ. ನಗರೀಕರಣದ ಪ್ರಭಾವದಿಂದಾಗಿ ಪರಿವರ್ತನೆಯ ಸಂಕ್ರಮಣ ಸ್ಥಿತಿಯಲ್ಲಿ ಮುಗ್ಧರ ಬಾಳು, ಭಾವನೆಗಳು ಯಾಂತ್ರಿಕವಾಗಿವೆ. ಹೆಣ್ಣಿನ ಚಂಚಲಕ್ಕೆ ವಾಂಛಲ್ಯಕ್ಕೆ ಗಂಡು ಬಲಿಪಶುವಾಗುವುದು. ಆ ಮೂಲಕ ಹೆಣ್ಣು ತನ್ನಷ್ಟಕ್ಕೆ ತಾನು ಶೋಷಿಲ್ಪಡುವುದು ಈ ಕಾದಂಬರಿಯ ಕತಾವಸ್ತು.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MORE