ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಐತಿಹಾಸಿಕ ಕಾದಂಬರಿ-ಧರ್ಮ ಚಕ್ರವರ್ತಿ ಅಶೋಕ. ಭಾರತೀಯ ತತ್ವಶಾಸ್ತ್ರ, ಧರ್ಮಶಾಸ್ತ್ರದಲ್ಲಿ ಅಶೋಕ ಚಕ್ರವರ್ತಿಯ ನಡೆ-ನುಡಿ-ತ್ಯಾಗ ಹಾಗೂ ಸಮಸ್ತ ಮನುಕುಲದ ಉದ್ಧಾರಕ್ಕೆ ಯುದ್ಧ ತ್ಯಜಿಸಿದ ದೃಢ ನಿರ್ಧಾರವು ಐತಿಹಾಸಿಕವಾಗಿ ಮನ್ನಣೆಗೆ ಪಾತ್ರವಾಗಿದೆ. ಬೌದ್ಧ ಧರ್ಮವನ್ನು ಸ್ವೀಕರಿಸಿ ಅದರ ಪ್ರಚಾರಕ್ಕಾಗಿ ತನ್ನ ಅಂತಿಮ ದಿನಗಳನ್ನು ಮೀಸಲಿಟ್ಟ ದಿಟ್ಟ ವ್ಯಕ್ತಿತ್ವದ ಸಂಕೇತವಾಗಿ ಅಶೋಕನು ಕಂಗೊಳಿಸುತ್ತಾನೆ. ಇಂತಹ ಉದಾತ್ತ ಗುಣಧರ್ಮದ ಅಶೋಕನ ವ್ಯಕ್ತಿತ್ವದ ಪರಿಚಯವಾಗಿ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇಂತಹ ಸಾಹಿತ್ಯಕ ಅಂಶಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...
READ MORE