ಲೇಖಕ ಕಿಗ್ಗಾಲು. ಎಸ್. ಗಿರೀಶ್ ಅವರ ಒಂಬತ್ತನೆಯ ಕೃತಿ ‘ಒಂದು ಹಳ್ಳಿಯ ಸುತ್ತ’. ಇದೊಂದು ಸಾಮಾಜಿಕ ಕಾದಂಬರಿ. ಅದುವರೆಗೂ ಅಂಧಕಾರದಲ್ಲಿ ಮುಳುಗಿ, ಗಾಢನಿದ್ರೆಯಲ್ಲಿದ್ದ ವಿಶ್ವನಾಥಪುರಕ್ಕೆ ಉತ್ಸಾಹೀ ಯುವಕ ಸೋಮಪ್ಪ ಬಂದಾಗ ಗ್ರಾಮದ ಚಿತ್ರಣವು ಬದಲಾಗುತ್ತದೆ.ಹಾಗೆ,ಮತ್ತೊಬ್ಬ ಶಿಕ್ಷಕ ಆ ಗ್ರಾಮದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾನೆ.ಇವರಿಗೆ ಶ್ರೀಮಂತರ ಮಗಳು ನಂದಿನಿ ಹಾಗೂ ವಿದ್ಯಾಧಿಕಾರಿ ಚಂದ್ರಿಕಾಳ ಪರಿಚಯವಾಗುತ್ತದೆ,ಪ್ರೇಮಾಂಕುರಗೊಳ್ಳುತ್ತದೆ. ಮಂತ್ರವಾದಿಯೊಬ್ಬನ ಸಲಹೆಯ ಮೇರೆಗೆ ವಶೀಕರಣವನ್ನು ಮಾಡಿ, ಮಲೆಯಾಳೀ ನರ್ಸನ್ನು ಹಿಡಿಯಲು ಹೋದ ತಿಂಗಳಯ್ಯನ ಹಲ್ಲುಗಳು ಮುರಿದುಹೋಗುತ್ತವೆ. ಕೂಲಿ ಕೆಲಸದ ಚೆನ್ನಿಯನ್ನು ಓಡಿಸಬೇಕೆಂದಿರುವಾಗ,ಗೌಡರ ಕೃಪೆಯಿಂದ ಅವಳು ಚೆನ್ನಮ್ಮನಾಗಿ,ಕೊನೆಗೆ ಚೆನ್ನಮ್ಮನವರೇ ಎಂದೂ ಕರೆಸಿಕೊಳ್ಳುತ್ತಾಳೆ. ತಾವು ಆಗರ್ಭ ಶ್ರೀಮಂತರೆಂದು ನಟಿಸಿ,ಸಂಬಂಧಗಳನ್ನು ಕುದುರಿಸುವಾಗ ಅದು ಮುರಿದುಹೋಗುತ್ತದೆ. ಹೀಗೆ,ಹಲವು ಘಟನೆಗಳನ್ನು ಆಧರಿಸಿ ಬರೆದ ಸಾಮಾಜಿಕ ಕಾದಂಬರಿ ಒಂದು ಹಳ್ಳಿಯ ಸುತ್ತ.
ಕೊಡಗು ಜಿಲ್ಲೆಯ ಕಿಗ್ಗಾಲು ಗ್ರಾಮದ ನಿವಾಸಿ ಕಿಗ್ಗಾಲು ಗಿರೀಶ್ ರವರು 1951ರ ಡಿಸೆಂಬರ್ 24 ರಂದು ಶ್ರೀನಿವಾಸ ರಾಜಲಕ್ಷ್ಮಿ ಹವ್ಯಕದಂಪತಿಗಳ ದ್ವಿತೀಯ ಪುತ್ರನಾಗಿ ಕಿಗ್ಗಾಲುವಿನಲ್ಲಿ ಜನಿಸಿದರು. ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಪಡೆದ ಇವರು ಮಡಿಕೇರಿಯ ಅಂದಿನ ಸರಕಾರೀ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಗಳಿಸಿದರು.ಅನಂತರ,ಭಾರತೀಯ ವಾಯುಪಡೆಗೆ ಆಯ್ಕೆಯಾಗಿ,ಗುಜರಾತಿನ ಭುಜ್ ಪಟ್ಟಣದಲ್ಲಿ ವಾಯುಸೇನಾ ಕರ್ತವ್ಯಕ್ಕಿಳಿದರು. ವಿದ್ಯಾರ್ಥಿಯಾಗಿರುವಾಗಲೇ ಸುಧಾ,ಪ್ರಜಾವಾಣಿ ಮುಂತಾದ ನಿಯತಕಾಲಿಕಗಳಿಗೆ ಬರೆಹಗಳನ್ನು ನೀಡುತ್ತಿದ್ದ ಇವರು ವಾಯುಪಡೆಯಲ್ಲಿಯೂ ಲೇಖನಗಳನ್ನು ಬರೆಯುತ್ತಿದ್ದರು.ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆಯಲ್ಲಿ ಎಮ್ ಏ ಪದವಿ ಗಳಿಸಿ,ಹದಿನೇಳು ವರ್ಷ ಸೇವೆಮಾಡಿ ಅನಂತರ ಸೇನೆಯಿಂದ ನಿವೃತರಾದರು. ಮಡಿಕೇರಿ ಆಕಾಶವಾಣಿಯಲ್ಲಿ ...
READ MORE