`ಇಮ್ಮಡಿ ಪುಲಿಕೇಶಿ' ಎಂಬುದು ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಎಸ್.ವಿ. ಶ್ರೀನಿವಾಸರಾವ್ ರಚಿಸಿದ್ದಾರೆ. ಉತ್ತರಾ ಪಥೇಶ್ವರನೆನ್ನಿಸಿಕೊಂಡ ಹರ್ಷವರ್ಧನನನ್ನು ಸೋಲಿಸಿದ ವೀರ. ತಮ್ಮನಿಗಾಗಿ ರಾಜ್ಯವನ್ನೇ ಬಿಟ್ಟು ಕೊಡಲು ಸಿದ್ಧನಾದ ತ್ಯಾಗಿ. ಪರ್ಷಿಯಾದವರೆಗೆ ತನ್ನ ಖ್ಯಾತಿಯನ್ನು ಹಬ್ಬಿಸಿದ ವೀರ, ಪ್ರಜಾವತ್ಸಲ ಚಕ್ರವರ್ತಿ ಎಂದು ಇಮ್ಮಡಿ ಪುಲಿಕೇಶಿಯ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇಮ್ಮಡಿ ಪುಲಿಕೇಶಿಯ ಯುದ್ಧವೈಖರಿ, ತ್ಯಾಗ ಜೀವನ, ಬಾಲ್ಯದ ದಿನಗಳು, ಪ್ರಜೆಗಳೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧ ಹೀಗೆ ಇಮ್ಮಡಿ ಪುಲಿಕೇಶಿ ಬದುಕಿನ ಪ್ರಮುಖ ಘಟ್ಟಗಳನ್ನು ಇಲ್ಲಿ ನವಿರಾಗಿ ಚಿತ್ರಿಸಲಾಗಿದೆ.
ಎಸ್.ವಿ. ಶ್ರೀನಿವಾಸರಾವ್ ಅವರು ತುಮಕೂರು ಜಿಲ್ಲೆಯ ಗೂಳೂರು ಹೋಬಳಿಯ ಚಿಕ್ಕಸಾರಂಗಿ ಗ್ರಾಮದಲ್ಲಿ 1931 ಡಿಸೆಂಬರ್ 24ರಂದು ಜನಿಸಿದರು. ಮನೆತನದಿಂದ ಶ್ಯಾನುಭೋಗರು. ತಂದೆ ಶ್ಯಾನುಭೋಗ್ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಬಿಎಸ್ಸಿ, ಎ.ಎಂ.ಐ.ಇ ಹಾಗೂ ಮೈಸೂರು ವಿ.ವಿ.ಯಿಂದ ಎಂ.ಎ. ಪದವೀಧರರು. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸಿಕ್ಯೂಎಎಲ್ ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಓದಿದ್ದು, ವಿಜ್ಞಾನವಾದರೂ ಸಾಹಿತ್ಯದ ಗೀಳು. ಕಾಡ ಬೆಳದಿಂಗಳು, ಮಬ್ಬು ಮುಂಜಾವು, ಸ್ವರಮೇಳ, ಇಬ್ಬನಿ, ರಂಗಸ್ಥಳ ಸೇರಿದಂತೆ 156ಕ್ಕೂ ಹೆಚ್ಚು ಕಥೆ, ಕಾದಂಬರಿಗಳು ಹಾಗೂ ಮಕ್ಕಳ ಸಾಹಿತಿಗಳ ಕುರಿತ ಮಕ್ಕಳೇ ಇವರನ್ನು ನೀವು ಬಲ್ಲಿರಾ ಕೃತಿ ಹಾಗೂ ...
READ MORE