ಲೇಖಕಿ ಗೀತಾಂಜಲಿ ಬಿ.ಎಮ್. ಅವರ ಕಾದಂಬರಿ ’ಅವಳ ತಲ್ಲಣಗಳು’. ಹೆಣ್ಣೊಬ್ಭಳು ಸಮಾಜದಲ್ಲಿ ದಿನನಿತ್ಯ ಅನುಭವಿಸುವಂತಹ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಲೇಖಕಿ ತಾನು ಸಮಾಜದಿಂದ ಅನುಭವಿಸಿದಂತಹ ಸಂಗತಿಗಳ ಬಗ್ಗೆ ವಿವರಿಸುತ್ತಾ, ಸಮಾಜದಲ್ಲಿ ಆಗಬೇಕಿರುವ ಬದಲಾವಣೆಯ ಕುರಿತು ಧ್ವನಿಯಾಗುತ್ತಾರೆ. ಈ ಕೃತಿಯ ಮೂಲ ಉದ್ದೇಶ ಸಮಾಜದಲ್ಲಿ ಅಸಹಾಯಕತೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳನ್ನು ಹುರಿದುಂಬಿಸುವುದಾಗಿದೆ. ಜಗತ್ತೇ ನಶ್ವರ ಎಂದೆನಿಸಿಕೊಳ್ಳುವ ವ್ಯಕ್ತಿಗಳಿಗೆ ಜೀವನವನ್ನು ಮತ್ತೆ ಹೊಸ ರೀತಿಯಲ್ಲಿ ಕಾಣುವಂತೆ ಈ ಕೃತಿ ಪ್ರೇರೇಪಿಸುತ್ತದೆ ಎನ್ನುತ್ತಾರೆ ಲೇಖಕಿ ಗೀತಾಂಜಲಿ. ಉದ್ಯೋಗಿಯಾಗಿರುವಂತಹ ಹೆಣ್ಣೊಬ್ಬಳು ಸಮಾಜದಿಂದ ಅನುಭವಿಸುವ ಅಸಹಾಯಕತೆ ದೌರ್ಜನ್ಯ, ನೋವು ಯಾತನೆ ಒಂಟಿತನ ಹೀಗೆ ಮುಂತಾದ ಸಂಗತಿಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.
ಲೇಖಕಿ ಗೀತಾಂಜಲಿ ಬಿ. ಎಮ್ ಅವರು ವೃತ್ತಿಯಿಂದ ಪತ್ರಕರ್ತೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಭರತ ನಾಟ್ಯ ಕಲೆ, ಸಾಹಿತ್ಯ ಮತ್ತು ಓದು ಬರಹ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಕೃತಿಗಳು: ಅವಳ ತಲ್ಲಣಗಳು (ಕಾದಂಬರಿ) ...
READ MORE