ಕೆಳದಿ ಚೆನ್ನಮ್ಮ ಅವರ ಸಾಹಸಮಯ ಹೋರಾಟದ ಕುರಿತು ಬರೆದ ಕಾದಂಬರಿ ರೂಪದ ಜೀವನ ಚರಿತ್ರೆ ಇದು. ಮೊಗಲರು-ಮರಾಠಿಗರ ಅರಸು ಆಡಳಿತಗಾರರ ಕಥೆಯೂ ಆಗಿದೆ. ಐತಿಹಾಸಿಕ ಸಂಗತಿಗಳ ವಿಷಯವಸ್ತು ಆಗಿದ್ದರೂ ವಾಸ್ತವಾಂಶಗಳಿಗೆ ಇಲ್ಲಿಯ ಕಥಾವಸ್ತು ಮುಖಾಮುಖಿಯಾಗುವಷ್ಟು ಅರ್ಥಪೂರ್ಣವಾಗಿ ಲೇಖಕರು ಬರೆದಿದ್ದಾರೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE