‘ರಜತಾದ್ರಿಯ ಕನಸು’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ `ಪ್ರೀತಿ ಇಲ್ಲಿ ಹೆಚ್ಚು ಚರ್ಚಿತವಾದ ಕಥಾವಸ್ತು. ಆದರ್ಶ ಮೌಲ್ಯಗಳನ್ನು ಕೂಡಿಸಿಕೊಂಡ ಹೆಣ್ಣು ಪ್ರೀತಿ, ಪ್ರೇಮ ಸಂಬಂಧಗಳ ವಿಚಾರದಲ್ಲಿ ಸವಕಲಾಗಿದ್ದು ಯಾಕೆ? ಪ್ರಗತಿಗಾಮಿ ಮನೋಭಾವದ ಹೆಣ್ಣುಗಳು ನನ್ನಲ್ಲಿ ಚರ್ಚಿಸಿದ್ದುಂಟು. ಅವರೆಲ್ಲ ನನ್ನ ಬರವಣಿಗೆಯಲ್ಲಿ ಪಾತ್ರಗಳಾಗಿದ್ದಾರೆ. ಕತೆ ಕಾದಂಬರಿಗಳಲ್ಲಿ ಪಾತ್ರಗಳಾಗುವ ಆಸೆ ಯಾರಿಗಿಲ್ಲ? ಕಾದಂಬರಿಯಲ್ಲಿನ ಪಾತ್ರಗಳ ಸುಖದುಃಖಗಳನ್ನು ತಮ್ಮದೇ ಎಂಬಂತೆ ಅನುಭವಿಸಿ ಸುಖಿಸುವ, ದುಃಖಿಸುವ, ಪ್ರತಿಕ್ರಯಿಸುವ ಕಥಾವಸ್ತುಗಳನ್ನು ಈ ಕೃತಿಯು ಹೊಂದಿರುತ್ತದೆ. ಒಟ್ಟಾರೆಯಾಗಿ, ರಜತಾದ್ರಿಯ ಗರ್ಭದಲ್ಲಿ ನೂರು ಕನಸುಗಳು ಹುದುಗಿಹೋಗಿವೆ. ಭಾಮಿನಿ ಅದರ ಮೇಲೆ ಕಲ್ಲು ಚಪಡಿ ಎಳೆದವಳು. ಅದನ್ನು ಶಾರದಾ ತೆಗೆದಿದ್ದಾಳೆ. ಈಗ ಎಲ್ಲಾ ಕನಸುಗಳು ನನಸಾಗಲಿ ಎಂಬುದನ್ನು ಪ್ರಸ್ತಾಪಿಸಲಾಗಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE