ಹಿರಿಯ ಸಾಹಿತಿ ಬಿ. ಪುಟ್ಟಸ್ವಾಮಯ್ಯ ಅವರು ಬರೆದ ಕಾದಂಬರಿ-ರತ್ನಹಾರ. ಭಾರತ-ಪಾಕಿಸ್ತಾನ ವಿಭಜನೆಯ ಸುಳಿವು ಅರಿತಿದ್ದ ವ್ಯಾಪಾರಿ ಕಿಶನ್ ಚಂದ್ ಅವರಲ್ಲಿದ್ದ ರತ್ನದ ಹಾರವನ್ನು ರಹಸ್ಯವಾಗಿ ಪಾಕಿಸ್ತಾನಕ್ಕೆ ಸೇರುವ ಪ್ರದೇಶದ ಯಾವುದಾದರೂ ಬ್ಯಾಂಕಿನಲ್ಲಿಟ್ಟರೂ ಕಷ್ಟ. ಭಾರತದ ಬ್ಯಾಂಕಿನಲ್ಲಿಟ್ಟರೂ ಕಷ್ಟ. ಏನು ಮಾಡಬೇಕು ಎಂಬುದು? ನಂತರದ ವಿದ್ಯಮಾನಗಳಿಂದ ಈ ರತ್ನಹಾರ ಕುರಿತೇ ಕಾದಂಬರಿ ಸಾಗುತ್ತದೆ. ಹೇಗೆ ಈ ರತ್ನಹಾರವನ್ನು ಉಳಿಸಿಕೊಳ್ಳಲಾಗುತ್ತದೆ ಎಂಬುದು ಕಥಾವಸ್ತು.
ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ...
READ MORE