‘ಪಂಜರ’ ಸಾರಾ ಅಬೂಬಕ್ಕರ್ ಅವರ ಕಾದಂಬರಿಯಾಗಿದೆ. ಹೆತ್ತ ಮಗುವನ್ನು ಸ್ವಸಂತೋಷದಿಂದ ಆಕೆ ತ್ಯಜಿಸಬಲ್ಲಳೇ ? ಅವಳ ಮಾನಸಿಕ ಹಿಂಸೆ- ಒತ್ತಡಗಳೇನು ? ಕೇವಲ ಹೆಣ್ಣಿಗೆ ಮಾತ್ರ ಸಾಮಾಜಿಕ ಕಟ್ಟುಪಾಡುಗಳಿದ್ದು ಗಂಡಿಗೆ ಅವು ಅನ್ವಯಿಸುವುದಿಲ್ಲವೆ ? ಪ್ರಗತಿಪರ ಚಿಂತನೆಯ ಲೇಖಕಿ ಸಾರಾ ಅವರು ಈ ಕಾದಂಬರಿಯಲ್ಲಿ ಇಂಥ ಕ್ಲಿಷ್ಟ ಸಾಮಾಜಿಕ ಸಮಸ್ಯೆಯನ್ನು ವಸ್ತುವನ್ನಾಗಿಸಿದ್ದಾರೆ. ಅವಿವಾಹಿತ ತಾಯಿಯೋರ್ವಳ ಸುತ್ತ ತಾನಾಗಿ ಹೆಣೆದುಕೊಳ್ಳುವ ಪಂಜರದಂಥ ವ್ಯವಸ್ಥೆಯ ಸ್ವರೂಪವನ್ನು ಪರಿಚಯಿಸಿದ್ದಾರೆ.
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...
READ MOREಹೊಸತು - ಮಾರ್ಚ್ -2005
ಮಾತೃದೇವೋಭವ ಎಂಬ ಪೂಜನೀಯ ಸ್ಥಾನ ನೀಡಿದ್ದರೂ ನಮ್ಮ ಸಮಾಜದಲ್ಲಿ ಓರ್ವ ಅವಿವಾಹಿತೆ ತಾಯಿಯಾದಾಗ ಆಕೆಯ ಬಗ್ಗೆ ಎಲ್ಲಿಲ್ಲದ ತಿರಸ್ಕಾರ ಮೂಡುತ್ತದೆ. ಜನಾಪವಾದಕ್ಕೆ ಅಂಜಿ ಕುಂತಿಯಂಥ ರಾಜಕನೈಯೇ ಕರ್ಣನಂಥ ವೀರಾಗ್ರಣಿಯನ್ನು ತ್ಯಜಿಸಬೇಕಾದಂಥ ಕಥೆ ಮಹಾಭಾರತದಲ್ಲಿದೆ. ಇಂದಿನ ಭಾರತದಲ್ಲೂ ಇಂಥ ಸಮಸ್ಯೆಗಳು ಸಾಕಷ್ಟು ಎದುರಾಗಿ ಹೆಣ್ಣಿನ ಬಾಳಿನಲ್ಲಿ ಮಾತ್ರವೇ ಮುಳ್ಳಿನಂತೆ ಚುಚ್ಚಿ ಬದುಕಿಡೀ ನೋಯಿಸಬಲ್ಲವು. ತಾನು ಹೆತ್ತ ಮಗುವನ್ನು ಸ್ವಸಂತೋಷದಿಂದ ಆಕೆ ತ್ಯಜಿಸಬಲ್ಲಳೇ ? ಅವಳ ಮಾನಸಿಕ ಹಿಂಸೆ- ಒತ್ತಡಗಳೇನು ? ಕೇವಲ ಹೆಣ್ಣಿಗೆ ಮಾತ್ರ ಸಾಮಾಜಿಕ ಕಟ್ಟುಪಾಡುಗಳಿದ್ದು ಗಂಡಿಗೆ ಅವು ಅನ್ವಯಿಸುವುದಿಲ್ಲವೆ ? ಪ್ರಗತಿಪರ ಚಿಂತನೆಯ ಲೇಖಕಿ ಸಾರಾ ಅವರು ಈ ಕಾದಂಬರಿಯಲ್ಲಿ ಇಂಥ ಕ್ಲಿಷ್ಟ ಸಾಮಾಜಿಕ ಸಮಸ್ಯೆಯನ್ನು ವಸ್ತುವನ್ನಾಗಿಸಿದ್ದಾರೆ. ಅವಿವಾಹಿತ ತಾಯಿಯೋರ್ವಳ ಸುತ್ತ ತಾನಾಗಿ ಹೆಣೆದುಕೊಳ್ಳುವ ಪಂಜರದಂಥ ವ್ಯವಸ್ಥೆಯ ಸ್ವರೂಪವನ್ನು ಪರಿಚಯಿಸಿದ್ದಾರೆ.