ಅಲಕ ತೀರ್ಥಹಳ್ಳಿ ಅವರು ಬರೆದಿರುವ ಮುಂದೆ ಬರುವುದು ಮಹಾನವಮಿ ಕೃತಿಯು ಕಳ್ಳುಬಳ್ಳಿ ಮತ್ತು ನೆರೆಹೊರೆಯ ಸಂಬಂಧವನ್ನು ಹಿತಮಿತವಾಗಿ ನಿಭಾಯಿಸುವ ಮೂರು ತಲೆಮಾರುಗಳ ಕುಟುಂಬ ಕಥನ ಇಲ್ಲಿದೆ. ಇಲ್ಲಿಯ ಜನರು ಸಂಪ್ರದಾಯ ಮತ್ತು ಆಧುನಿಕತೆಯ ಹದವನ್ನು ಅರಿತು, ಹಳೆಯದನ್ನು ಉಳಿಸಿಕೊಳ್ಳುವ ಹೊಸದನ್ನು ಬಿಟ್ಟುಕೊಡದ ಮನಃಸ್ಥಿತಿಯವರು; ಈ ಕಾಲದ ಅನಿವಾರ್ಯ ಕರ್ಮವಾದ ವಲಸೆಯಿಂದಾಗಿ ನೆಲೆಯನ್ನು ಕಳೆದುಕೊಂಡರೂ ಮೂಲನೆಲದ ಒಲವನ್ನು ಉಳಿಸಿಕೊಂಡವರು; ನೆಮ್ಮದಿಯ ನಾಳೆಗಳಿಗೆ ತಮ್ಮನ್ನು ತೆರೆದುಕೊಂಡವರು ಎಂದು ಬೆನ್ನುಡಿ ಬರೆದಿರುವ ಅಮರೇಶ ನುಗಡೋಣಿಯವರ ಮಾತುಗಳು ಇಡೀ ಪುಸ್ತಕದ ಸಾರವನ್ನೇ ಹೇಳುತ್ತದೆ.
ಈ ಕತೆಗಳ ಸಹವಾಸವೇ ಸಾಕು- ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದ ಅಲಕ ತೀರ್ಥಹಳ್ಳಿ ಅವರು ಸಾಗರ (ಶಿವಮೊಗ್ಗ ಜಿಲ್ಲೆ) ಸಮೀಪದ ಹೂಗೊಪ್ಪಲಿನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿರುವ ಅಲಕ ಅವರು, ಛಂದ ಪುಸ್ತಕ ಪ್ರಶಸ್ತಿ(2005) ಕಥಾರಂಗಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಅಲಕ ತೀರ್ಥಹಳ್ಳಿ' ಎಂಬ ಹೆಸರಿನಲ್ಲಿ ಲಕ್ಷ್ಮೀನಾರಾಯಣ ಬರೆದಿದ್ದಾರೆ. ಆ ಕಥೆಗಳಲ್ಲದೆ ಕವನ, ಹನಿಗವನ ಮತ್ತು ನಾಟಕಗಳನ್ನೂ ಬರೆದಿರುವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಈ ಕಥೆಗಳ ಸಹವಾಸವೇ ಸಾಕು, ನವಿಲೆಸರ (ಕಥಾ ಸಂಕಲನಗಳು), ಶಾಲಾ ಮಕ್ಕಳ ...
READ MOREಮುಂದೆ ಬರುವುದು ಮಹಾನವಮಿ' ಕೃತಿಯ ಬಗ್ಗೆ ಅಲಕ ತೀರ್ಥಹಳ್ಳಿ ಅವರ ಅಭಿಪ್ರಾಯ