ಬಾಳಿನ ಭಾಗ್ಯನಿಧಿ

Author : ಹೆಚ್.ಜಿ. ರಾಧಾದೇವಿ



Year of Publication: 2012

Synopsys

ಕಾದಂಬರಿಗಾರ್ತಿ ರಾಧಾದೇವಿಯವರ ಇತರೆಲ್ಲ ಕಾದಂಬರಿಗಳಿಗಿಂತ ಕೊಂಚ ವಿಭಿನ್ನವಾದ ಕಾದಂಬರಿ ಇದು .ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಚ್ಚಾಗಿ ಪರಂಪರಾಗತ ಮೌಲ್ಯಗಳು ಕಾಣ ಬರುತ್ತವೆ . ಅವರು ಎಂದೂ ಪತಿ ಪತ್ನಿಯರನ್ನು ಅಗಲಿಸಲಿಲ್ಲ, ಅಥವಾ ಕಥಾ ನಾಯಕಿಯರು ಏನೆಲ್ಲಾ ಕಾರಣಗಳಿಗೆ ಪತಿಯಿಂದ ದೂರಾದರೂ,ವಿಚ್ಛೇದನ ಕೊಡಿಸಲಿಲ್ಲ .( ನಾಯಕಿಯರು ಕ್ಷಮಯಾ ಧರಿತ್ರಿಯರಾಗಿ ಗಂಡನ ತಪ್ಪುಗಳನ್ನು ಕ್ಷಮಿಸುತ್ತಾರೆ.ಅಂತೆಯೇ ನಾಯಕರೂ ಸಹಾ ಒಂದಲ್ಲಾ ಒಂದು ಕಾಲಘಟ್ಟದಲ್ಲಿ ತಮ್ಮ ಕೃತ್ಯಕ್ಕೆ ಪಶ್ಚಾತಾಪ ಪಡುವವರೇ ಆಗಿರುತ್ತಾರೆ .) ಒಡೆದ ಸಂಸಾರ ಒಂದುಗೂಡಿಸುವುದು . ಕುಟುಂಬ ವ್ಯವಸ್ಥೆ ಉಳಿಸುವುದನ್ನೇ ಅವರು ತಮ್ಮ ಕಾದಂಬರಿಗಳಲ್ಲಿ ಪ್ರತಿಪಾದಿಸಿದರು . ಆದರೆ ಈ ಕಾದಂಬರಿ ಅವರ ಉಳಿದೆಲ್ಲಾ ಕಾದಂಬರಿಗಳಿಗಿಂತ ವಿಭಿನ್ನವಾಗಿದೆ . ಈ ಕಾದಂಬರಿಯ ನಾಯಕಿ ತನಗೆ ವೈವಾಹಿಕ ಬದುಕಿನಲ್ಲಿ ಉಂಟಾದ ಬಹು ದೊಡ್ಡ ಅನ್ಯಾಯವನ್ನು ದಿಟ್ಟತನದಿಂದ ಪ್ರತಿಭಟಿಸುತ್ತಾಳೆ ಮಾತ್ರವಲ್ಲ , ತವರು ಮನೆಯವರ ಬೆಂಬಲವಿಲ್ಲದಿದ್ದಾಗ್ಯೂ ತಾನೇ ಏಕಾಂಗಿಯಾಗಿ ಬದುಕಿ ಹೊಸ ಬದುಕು ಎದುರುಗೊಳ್ಳುವ ಸಾಹಸ ಮಾಡುತ್ತಾಳೆ .

ಬಹುಶಃ ಬದಲಾದ ಕಾಲದೊಂದಿಗೆ ಲೇಖಕಿಯ ವಿಚಾರ ಧಾರೆಯೂ ಬದಲಾಗಿರುವ ಸೂಚನೆ ಇದಾಗಿರಬಹುದು . ಈ ಕಾದಂಬರಿಯ ಕಥಾ ನಾಯಕಿ ಸರಳಾ. ಇದು ರಾಧಾದೇವಿಯವರ ಅರವತ್ಮೂರನೇ ಕಾದಂಬರಿ. 1991ರಲ್ಲಿ ಗೀತಾ ಏಜೆನ್ಸೀಸ್ ರವರಿಂದ ಮೊದಲ ಮುದ್ರಣ ಕಂಡ ಈ ಕಾದಂಬರಿ , 2012ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನದಿಂದ ಎರಡನೇ ಮುದ್ರಣವನ್ನೂ ಕಂಡಿದೆ .

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books