‘ಸಾರಾ’ ಅನುಷ್ ಎ ಶೆಟ್ಟಿಯವರ ಕಾದಂಬರಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ: ರೋಲೆಂಡ್ ಕೋಟ್ಸ್ ಎಂದಿನಂತೆ ಮಲಗುವ ಮುನ್ನ ತಮ್ಮ ಮನೆಯ ಕಾರಿಡಾರಿನಲ್ಲಿ ಸ್ವೆಟರ್ ಧರಿಸಿ, ಬೀಡಿ ಹಚ್ಚಿ ಬಿದಿರಿನ ಒರಗು ಕುರ್ಚಿಯಲ್ಲಿ ಒರಗಿ ಕೂತು ಗಿಟಾರ್ ನುಡಿಸತೊಡಗಿದರು. ಕುರುಡಾಗಿದ್ದ ಅವರಿಗೆ ನೋಟದ ವಿನಃ ಈ ಜಗತ್ತನ್ನು ಸವಿಯಲು ಕೊಂಚ ಹೆಚ್ಚಿಗೆ ಜಾಗೃತವೂ, ಸೂಕ್ಷ್ಮವೂ ಆದ ಮಿಕ್ಕ ಇಂದ್ರಿಯಗಳು ಸಹಕರಿಸುತ್ತಿದ್ದರಿಂದ ಅವರು ಗಿಟಾರನ್ನು ತಮ್ಮ ಹೊಟ್ಟೆಗೆ ಆತು ಹಿಡಿದು, ಒಂದೊಂದಾಗಿ ಅದರ ತಂತಿಗಳನ್ನು ಮೀಟತೊಡಗಿ, ಬೀಡಿ ತುದಿಯ ಕಿಡಿಯು ಉಜ್ವಲಿಸುವಂತೆ ಒಮ್ಮೆ ನೀಳವಾಗಿ ಉಸಿರೊಳಗೆಳೆದು, ತಂತಿಯ ನಾದ ತರಂಗಗಳು ಗಿಟಾರಿನ ಒಳಗೆಲ್ಲ ಸಂಚರಿಸಿ ಉಂಟಾಗುತ್ತಿದ್ದ ಸಣ್ಣ ಕಂಪನಗಳನ್ನು ಹೊಟ್ಟೆತುಂಬ ಆನಂದಿಸಿ, ಬೀಡಿಯನ್ನು ಕಚ್ಚಿಟ್ಟ ಹಲ್ಲುಗಳ ನಡುವಿನಿಂದ ಉಪ್ಪೆಂದು ಹೊಗೆಯ ಮೋಡವೊಂದನ್ನು ಹೊರಚೆಲ್ಲಿ, ತುಟಿಯಲ್ಲಿ ಮೂಡಿದ ಮುಗುಳುನಗೆಯೊಂದಿಗೆ ಮತ್ತೊಂದು ತರಂಗಗಳ ಲಹರಿಗೆ ಸಜ್ಜಾಗಿ ಮಂದ್ರ ಸ್ವರಗಳ ಮೇಲ್ತಿಂತಿಯನ್ನು ಮೀಟುತ್ತಿರುವಾಗಲೇ ಕರ್ಣೇಂದ್ರಿಯದ ಸುಖಕ್ಕೆ ಏನೋ ಭಂಗ ಬಂದಂತಾಗಿ ತಂತಿ ಮೀಟುವುದ ನಿಲ್ಲಿಸಿ ಆಲಿಸಿದರು. ಸಹಜವಾದ ಕಾಡು ಹುಳಗಳ ನಿಶಾಚಾರಿ ಪ್ರಪಂಚದ ಸದ್ದಿನೊಂದಿಗೆ ಅಸಹಜವಾದ ಮಾನವ ಸಮೂಹ ಮತ್ತು ನಾಯಿಗಳ ಗಲಭೆಯೊಂದು ಕೇಳಿಸತೊಡಗಿ, ಗಿಟಾರನ್ನು ಪಕ್ಕದಲ್ಲಿ ಒರಗಿಸಿ ಕುರ್ಚಿಯಿಂದೆದ್ದು, ಕೊಂಚವೇ ಉಳಿದಿದ್ದ ಬೀಡಿಯನ್ನು ಕೊನೆಯದಾಗೊಮ್ಮೆ ಎಳೆದು, ಕೆಳಹಾಕಿ ಹೊಸಕಿದರು ಎಂಬುವುದನ್ನು ಈ ಕಾದಂಬರಿಯಲ್ಲಿ ನೋಡಬಹುದು.
ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...
READ MORE