ಬಿಸಿಲುಪುರ

Author : ಬಾಳಾಸಾಹೇಬ ಲೋಕಾಪುರ

Pages 88

₹ 50.00




Year of Publication: 1996
Published by: ಕಣ್ವ ಪ್ರಕಾಶನ
Address: ,#11/26, 10 ನೇ ಡಿ ’ಕ್ರಾಸ್’, 2 ನೇ ಮುಖ್ಯ ರಸ್ತೆ, ವೆಸ್ಟ್ ಆಫ್ ಕೋರ್ಡ್ ರೋಡ್, ಮಹಾಲಕ್ಷೀ ಪುರಂ ಬೆಂಗಳೂರು-560086

Synopsys

ಲೇಖಕ ಬಾಳಾ ಸಾಹೇಬ ಲೋಕಾಪುರ ಅವರ ಕಾದಂಬರಿ ’ಬಿಸಿಲುಪುರ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಕೃತಿಗೆ ಮುನ್ನುಡಿ ಬರೆದ  ಶ್ರೀರಾಮ ಇಟ್ಟಣ್ಣವರ ಅವರು, ‘ಸಂಧಿಕಾಲದ ಇಂದಿನ ಹಳ್ಳಿಗಳಲ್ಲೊಂದು ಬಿಸಿಲುಪುರ. ಆಧುನಿಕ ದ್ವಂದ್ವಗಳು ಇದಕ್ಕೆ ಸೇರಿ ಕಾದಂಬರಿಗೆ ನವ್ಯತೆ ದಕ್ಕಿದೆ. ಹಳ್ಳಿ ಸಮುದಾಯದ ಜಾತಿ ವ್ಯವಸ್ಥೆಯ ನೆಲೆಯಲ್ಲೆ ಬೆಳೆಯುವ ಮನುಷ್ಯ ಸಂಬಂಧಗಳಿಗೆ ಇಲ್ಲಿ ಹೆಚ್ಚಿನ ಆಕರ್ಷಣೆ ಇದೆ. ಮಾನವೀಯ ಸಂಬಂಧಗಳನ್ನು ಅರಳಿಸುವ ಸಾಮಾಜಿಕ ಎಚ್ಚ್ರರವು ಲೇಖಕನನ್ನೂ ಉದ್ದಕ್ಕೂ ನಿಯಂತ್ರಿಸಿದೆ. ಯಾವುದೇ ಪಾತ್ರಕ್ಕೆ ಒಣ ಆದರ್ಶದ ಬಣ್ಣಗಾರಿಕೆ ಇಲ್ಲ.  ಪಾತ್ರಗಳ ಸ್ವಭಾವ ವಿಸ್ತರಣೆಯಲ್ಲಿ ಲೇಖಕ ಇರಿಸಿಕೊಂಡ ನಿತಾಂತ ಸಂಯಮ ಗುಣಾತ್ಮಕ ಅಂಶವೆನಿಸುತ್ತದೆ. ಹುಡುಗಿಯರ ನನಸುಗಳಿಗೆ ತಡೆಯಾಗಿರುವ ಬಿಸಿಲುಪುರದ ಹೊಳೆ , ಬಿಟ್ಟೂ ಬಿಡದೆ ಮೂರು ದಿನಗಳ ಕಾಲ ಸುರಿಯುವ ಮಳೆ, ಇಂತಹ ಸಂಕೇತಗಳು ಕಲೆಗಾರಿಕೆಗೆ ರಂಗು ತುಂಬಿವೆ. ಸುರಿಯುವ ಮಳೆಯಲ್ಲಿ ಊರು ಕೇರಿಗಳೆಲ್ಲಾ ಒಂದಾದದ್ದು ಕೊನೆಯಲ್ಲಿ ಗೌಡತಿ ಹೊಟ್ಟೆಯಲ್ಲಿ ಕೂಸು ಮೂಡುವುದು, ಲೇಖಕನ ಹೊಸ ಆಶೋತ್ತರಗಳಾಗಿವೆ. ಹೀಗೆ ಕಾದಂಬರಿಯ ಬೇರೆ ಬೇರೆ ಮಗ್ಗಲು ಕುರಿತು ಇನ್ನೂ ಹಲವು ವಿಚಾರಗಳನ್ನು ಮಾತನಾಡಬಹುದು’ ಎಂದಿದ್ದಾರೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books