ಹುತಾತ್ಮ ಅಮಟೂರು ಬಾಳಪ್ಪ ಎಂಬುದು ಲೇಖಕ ಯ.ರು.ಪಾಟೀಲ ಅವರ ಐತಿಹಾಸಿಕ ಕಾದಂಬರಿ. ಕಿತ್ತೂರು ರಾಣಿ ಚೆನ್ನಮ್ಮಳ ಅಂಗರಕ್ಷಕ. ನಂಬಿಗಸ್ಥ. ಚೆನ್ನಮ್ಮ ಹಾಗೂ ಬ್ರಿಟಷರ ಮಧ್ಯೆ ನಡೆದ ಯುದ್ಧದಲ್ಲಿ (1824ರ ಅಕ್ಟೋಬರ್ 23 ರಂದು) ಬ್ರಿಟಿಷ್ ಅಧಿಕಾರಿ ಥ್ಯಾಕರೆ ಅವರನ್ನು ಎದೆಗೆ ಗುಂಡಿಕ್ಕಿ ಕೊಂದ ಧೀರ ಈತ. ಆ ದಿನ ನೂರಾರು ಬ್ರಿಟಿಷ್ ಸೈನಿಕರನ್ನು ಸೆರೆ ಹಿಡಿಯಲಾಯಿತು. ಬ್ರಿಟಿಷರ ಮೇಲಿನ ವಿಜಯದ ಈ ದಿನವನ್ನು ಕಿತ್ತೂರು ಉತ್ಸವ ಎಂದು ಆಚರಿಸಲಾಗುತ್ತಿದೆ. ಇಂತಹ ದೇಶಪ್ರೇಮಿಯ ಹೋರಾಟದ ಚಿತ್ರಣ ನೀಡುವ ಐತಿಹಾಸಿಕ ಕಾದಂಬರಿ ಇದು.
ಲೇಖಕ ಯ.ರು.ಪಾಟೀಲ ಬೆಳಗಾವಿ ಜಿಲ್ಲಾ ಕಸಪ ಅಧ್ಯಕ್ಷರು. ಕೃತಿಗಳು: ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ, ...
READ MORE