ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ' ಬೇಸಿಕ್ ಇನ್ ಸ್ಟಿಂಕ್ಟ್ ' ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್ ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ ದಾಟಿಯ ಕಾದಂಬರಿಯನ್ನು ನಮಗೆ ನೀಡಿದ್ದು ಅಕ್ಷರ ಮಾಂತ್ರಿಕ ರವಿ ಬೆಳಗೆರೆ. ಕೊಲೆ, ತನಿಖೆ, ಪೊಲೀಸ್ ವ್ಯವಸ್ಥೆ, ಭ್ರಷ್ಟಾಚಾರ, ಸೈಕಿಯಾಟ್ರಿ ಜೊತೆಗೆ ತುಸು ಕಾಮ, ಪೋಲಿತನ ಒಳಗೊಂಡ ರೋಚಕ ಮರ್ಡರ್ ಮಿಸ್ಟ್ರೀ ಕಥೆ ಇದಾಗಿದೆ. ಕಥೆಯ ಆರಂಭ ಒಂದು ಕೊಲೆಯಿಂದ ಪ್ರಾರಂಭವಾಗಿ ನಂತರ ತನಿಖೆ ಆರಂಭವಾದಂತೆ ಒಬ್ಬರಾದ ಮೇಲೆ ಒಬ್ಬರ ಮೇಲೆ ಅಪರಾಧಿ ಭಾವನೆ ನಮಗೆ ಹುಟ್ಟುತ್ತದೆ. ಕೊಲೆಗೂ ಕಾದಂಬರಿಗೂ ಏನ್ ಸಂಬಂಧ ?, ಬರಹಗಾರ್ತಿಯೇ ಕೊಲೆಗಾರ್ತಿಯೇ ?, ಹೀಗೆ ನಾನಾ ಗೊಂದಲಗಳು ಕಾದಂಬರಿ ಓದುತ್ತಾ ಸಾಗಿದಂತೆ ನಿಮ್ಮನ್ನು ಖಂಡಿತ ಎಡೆಬಿಡದೆ ಕಾಡುತ್ತವೆ. ತನಿಖೆ ನಡೆಸಲು ಬರುವ ಖಡಕ್ ಪೊಲೀಸ್ ಅಧಿಕಾರಿ ಎನ್ಕೌಂಟರ್ ಸ್ಪೆಶಲಿಸ್ಟ್ ಪಾಲಿಯ ಚಾಣಾಕ್ಷತೆ, ಕೋಪ ಮತ್ತು ಆತನ ಸಹಾಯಕ ದೇವಧರನ್ ಕರ್ತವ್ಯ ನಿಷ್ಠೆ, ನಿಮ್ಮ ಹೃದಯ ಕದಿಯಬಹುದಾದ ಶರತ್ ಯಾಮಿನಿ ಎಂಬ ಬ್ಯೂಟಿ ವಿಥ್ ಬ್ರೇನ್ ಕಾಂಬಿನೇಷನ್ ಬರಹಗಾರ್ತಿ, ಗೊಂದಲಗಳ ಗೂಡು ಜೇನು , ಭ್ರಷ್ಟ ಅಧಿಕಾರಿ ಕಾಂಬಳೆ, ಕೋಪಿಷ್ಠನ ಪ್ರೀತಿಸುವ ಜೀಯಾ, ನೀನಾ ಎಮಿಲಿ ಎಂಬ ಸೈಕೊ ಕಿಲ್ಲರ್, ಹೀಗೆ ಪ್ರತಿಯೊಂದು ಪಾತ್ರವೂ ತನ್ನದೇ ಆದ ವಿಶೇಷತೆಯಿಂದ ಕೂಡಿವೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE